ದೀಪಾಗೆ ಖೇಲ್ ರತ್ನ.. 19 ಕ್ರೀಡಾ ಸಾಧಕರಿಗೆ ಅರ್ಜುನ ಪ್ರಶಸ್ತಿ

587

ನವದೆಹಲಿ: ರಾಷ್ಟ್ರೀಯ ಕ್ರೀಡಾ ದಿನಾಚರಣೆ ಹಿನ್ನೆಲೆಯಲ್ಲಿ ವಿವಿಧ ಕ್ರೀಡೆಯಲ್ಲಿ ಸಾಧನೆ ಮಾಡಿದ ಕ್ರೀಡಾ ಸಾಧಕರಿಗೆ ರಾಷ್ಟ್ರಪತಿ ರಾಮನಾಥ ಕೋವಿಂದ ಅವರು ಪ್ರಶಸ್ತಿ ಪ್ರಧಾನ ಮಾಡಿದ್ರು. ಪ್ಯಾರಾ ಅಥ್ಲೀಟ್ ದೀಪಾ ಮಲಿಕಗೆ ಭಾರತದ ಅತ್ಯುತ್ತಮ ಕ್ರೀಡಾ ಪ್ರಶಸ್ತಿಯಾದ ರಾಜೀವ ಗಾಂಧಿ ಖೇಲ್ ರತ್ನ ಪ್ರಶಸ್ತಿ ಪ್ರಧಾನ ಮಾಡಲಾಯ್ತು. ಈ ಪ್ರಶಸ್ತಿ ಪಡೆದ ಮೊದಲ ಮಹಿಳಾ ಪ್ಯಾರಾ ಅಥ್ಲೀಟ್ ಅನ್ನೋ ಗೌರವಕ್ಕೆ ಪಾತ್ರರಾದ್ರು.

ಇನ್ನೋರ್ವ ಕ್ರೀಡಾಪಟು ಕುಸ್ತಿ ಆಟಗಾರ ಬಜರಂಗ್ ಉನಿಯಾ, ಮುಂಬರುವ ವಿಶ್ವ ಚಾಂಪಿಯನಶಿಪ್ ಸಲುವಾಗಿ ರಷ್ಯಾದಲ್ಲಿರುವ ಕಾರಣ ಪ್ರಶಸ್ತಿ ಸಮಾರಂಭಕ್ಕೆ ಆಗಮಿಸಿರ್ಲಿಲ್ಲ. ಇನ್ನು 19 ಕ್ರೀಡಾಪಟುಗಳಿಗೆ ಅರ್ಜುನ ಪ್ರಶಸ್ತಿ ನೀಡಲಾಯ್ತು. ಖೇಲ್ ರತ್ನ ಪ್ರಶಸ್ತಿ 7.5 ಲಕ್ಷ ರೂಪಾಯಿ ಬಹುಮಾನ ಹೊಂದಿದೆ. ಅರ್ಜುನ ಪ್ರಶಸ್ತಿ ತಲಾ 5 ಲಕ್ಷ ರೂಪಾಯಿ ಬಹುಮಾನ ಹೊಂದಿದೆ.

ಇದೆ ವೇಳೆ ತರಬೇತುದಾರರಿಗೆ ದ್ರೋಣಾಚಾರ್ಯ ಮತ್ತು ಧ್ಯಾನಚಂದ ಪ್ರಶಸ್ತಿಗಳನ್ನ ಸಹ ನೀಡಲಾಯ್ತು. ಹಾಕಿ ದಂತಕಥೆ ಮೇಜರ್ ಧ್ಯಾನಚಂದ ಜನ್ಮ ದಿನಾಚರಣೆ ಪ್ರಯುಕ್ತ ಆಗಸ್ಟ್ 29 ರಂದು ರಾಷ್ಟ್ರೀಯ ಕ್ರೀಡಾ ದಿನಾಚರಣೆ ಆಚರಣೆ ಮಾಡಲಾಗ್ತಿದೆ. ಈ ವೇಳೆ ಕ್ರೀಡಾ ಸಾಧಕರಿಗೆ ಪ್ರಶಸ್ತಿ ಪ್ರಾಧನ ಮಾಡಲಾಗ್ತಿದೆ.




Leave a Reply

Your email address will not be published. Required fields are marked *

error: Content is protected !!