ಆರ್ಥಿಕತೆಗೆ ಶಕ್ತಿ ತುಂಬಲು ಮತ್ತೊಂದು ಪ್ಯಾಕೇಜ್

232

ಪ್ರಜಾಸ್ತ್ರ ಸುದ್ದಿ

ನವದೆಹಲಿ: ಕೋವಿಡ್ 19 ಸಾಂಕ್ರಾಮಿಕ ಕಾಯಿಲೆಯಿಂದ ಇಡೀ ದೇಶ ತತ್ತರಿಸಿ ಹೋಗಿದೆ. ಆರ್ಥಿಕತೆ ಅನ್ನೋದು ಸಾಕಷ್ಟು ಕುಸಿದಿದೆ. ಹೀಗಾಗಿ ಇದಕ್ಕೆ ಶಕ್ತಿ ತುಂಬಲು ಕೇಂದ್ರ ಹಣಕಾಸು ಸಚಿವೆ ನಿರ್ಮಲಾಸೀತಾರಾಮನ್ ಸೋಮವಾರ 1.1 ಲಕ್ಷ ಕೋಟಿಗಳ ಸಾಲ ಖಾತರಿ ಯೋಜನೆ ಸೇರಿ ಹಲವು ಯೋಜನೆಗಳನ್ನ ಪ್ರಕಟಿಸಿದ್ದಾರೆ.

ಈ ಬಗ್ಗೆ ಮಾತ್ನಾಡಿದ ಸಚಿವರು, 8 ಆರ್ಥಿಕ ಪರಿಹಾರಗಳನ್ನ ಪ್ರಕಟಿಸ್ತಿದ್ದೇವೆ. ಆರೋಗ್ಯ ಕ್ಷೇತ್ರಕ್ಕೆ 50 ಸಾವಿರ ಕೋಟಿ, ಕೋವಿಡ್ ಪೀಡಿತ ಪ್ರದೇಶಗಳಿಗೆ 1.1 ಲಕ್ಷ ಕೋಟಿ ಸಾಲ ಖಾತರಿ ಯೋಜನೆಗೆ ನೀಡಲಾಗ್ತಿದೆ ಎಂದರು. ಆತ್ಮನಿರ್ಭರ ಅಭಿಯಾನದಲ್ಲಿ ಇಸಿಎಲ್ ಜಿಎಸ್ ಗೆ 2020ರಲ್ಲಿ 3 ಲಕ್ಷ ಕೋಟಿ ನಿಗದಿ ಮಾಡಲಾಗಿತ್ತು. ಈಗ ಹೆಚ್ಚುವರಿಯಾಗಿ 1.5 ಲಕ್ಷ ಕೋಟಿ ನೀಡಲಾಗ್ತಿದೆ.

ಆತ್ಮನಿರ್ಭರ ಭಾರತ್ ರೋಜ್ ಗಾರ್ ಯೋಜನೆಯನ್ನ ಜೂನ್ 30, 2021ರಿಂದ ಮಾರ್ಚ್ 31, 2022ರ ವರೆಗೆ ವಿಸ್ತರಿಸಲಾಗಿದೆ. 80 ಸಾವಿರ ಸಂಸ್ಥೆಗಳ 21.4 ಲಕ್ಷಕ್ಕೂ ಹೆಚ್ಚು ಜನರು ಇದರ ಲಾಭ ಪಡೆಯಲಿದ್ದಾರೆ. ಇನ್ನು ಬಡವರಿಗೆ ಉಚಿತ ಪಡಿತರ ನೀಡುವ ಸಲುವಾಗಿ 93,869 ಕೋಟಿ ನೀಡಲಾಗ್ತಿದೆ. ಪ್ರಧಾನಮಂತ್ರಿ ಗರೀಬ್ ಕಲ್ಯಾಣ್ ಅನ್ನ ಯೋಜನೆಗಾಗಿ ಒಟ್ಟು 2,27,841 ಕೋಟಿ ನೀಡಲಾಗ್ತಿದೆ. ಪ್ರೋಟಿನ್ ಆಧರಿತ ರಸಗೊಬ್ಬರದ ಹೆಚ್ಚುವರಿ 15 ಸಾವಿರ ಕೋಟಿ ಸಬ್ಸಿಡಿಯನ್ನು ರೈತರು ಪಡೆಯಲಿದ್ದಾರೆ ಅಂತಾ ತಿಳಿಸಿದ್ರು.




Leave a Reply

Your email address will not be published. Required fields are marked *

error: Content is protected !!