ಟಿ-20 ವರ್ಲ್ಡ್ ಕಪ್ ದುಬೈಗೆ ಸ್ಥಳಾಂತರ

305

ಪ್ರಜಾಸ್ತ್ರ ಕ್ರೀಡಾ ಸುದ್ದಿ

ನವದೆಹಲಿ: ದೇಶದಲ್ಲಿ ಕರೋನಾ ಸೋಂಕಿನ ಪ್ರಮಾಣ ಇನ್ನು ಸಾಕಷ್ಟು ಪ್ರಮಾಣದಲ್ಲಿ ಇಳಿಕೆ ಕಂಡಿಲ್ಲ. 3ನೇ ಅಲೆಯ ಆತಂಕ ಬೇರೆ ಇದೆ. ಹೀಗಾಗಿ ಟಿ-20 ವರ್ಲ್ಡ್ ಕಪ್ ಟೂರ್ನಿಯನ್ನು ಯುಎಇಗೆ ಸ್ಥಳಾಂತರಿಸಲಾಗಿದೆ ಎಂದು ಬಿಸಿಸಿಐ ಕಾರ್ಯದರ್ಶಿ ಜೈ ಶಾ ಹೇಳಿದ್ದಾರೆ.

ಈ ಬಾರಿಯ ಟಿ-20 ವರ್ಲ್ಡ್ ಕಪ್ ಟೂರ್ನಿಯ ಆತಿಥ್ಯವನ್ನ ಭಾರತ ವಹಿಸಿಕೊಳ್ಳಬೇಕಿತ್ತು. ಆದ್ರೆ, ಕೋವಿಡ್ ಹಾವಳಿಯಿಂದಾಗಿ ಯುಎಇಗೆ ಸ್ಥಳಾಂತರವಾಗ್ತಿದೆ. ದಿನಾಂಕವನ್ನ ಐಸಿಸಿ ಪ್ರಕಟಿಸಲಿದೆ ಎಂದು ಜೈ ಶಾ ತಿಳಿಸಿದ್ದಾರೆ. ಈ ಮೂಲಕ ಹೊಡಿ ಬಡಿ ಆಟವನ್ನ ಭಾರತದಲ್ಲಿ ಕಣ್ತುಂಬಿಕೊಳ್ಳಬೇಕು ಎಂದುಕೊಂಡಿದ್ದ ಕ್ರಿಕೆಟ್ ಪ್ರೇಮಿಗಳಿಗೆ ನಿರಾಸೆಯಾಗಿದೆ.




Leave a Reply

Your email address will not be published. Required fields are marked *

error: Content is protected !!