ವಿಜಯಪುರದಲ್ಲಿ ಶೂನ್ಯ ಕೋವಿಡ್

239

ಪ್ರಜಾಸ್ತ್ರ ಸುದ್ದಿ

ವಿಜಯಪುರ: ಕಳೆದ ಮೂರು ತಿಂಗಳ ಬಳಿಕ ಗುಮ್ಮಟನಗರಿ ಜಿಲ್ಲೆಯಲ್ಲಿ ಮೊದಲ ಬಾರಿಗೆ ಕೋವಿಡ್ 19 ಸೋಂಕು ಶೂನ್ಯವಾಗಿದೆ. ಸೋಮವಾರ ಒಂದೇ ಒಂದು ಸೋಂಕಿತರ ಪ್ರಕರಣ ದಾಖಲಾಗಿಲ್ಲವೆಂದು ಜಿಲ್ಲಾಧಿಕಾರಿ ಪಿ.ಸುನೀಲಕುಮಾರ ತಿಳಿಸಿದ್ದಾರೆ.

ಪ್ರಸ್ತುತ ಜಿಲ್ಲೆಯಲ್ಲಿ 184 ಕೋವಿಡ್ ಸೋಂಕಿತರಿದ್ದಾರೆ. 161 ಜನರು ಹೋಮ್ ಐಶೋಲೇಷನ್ ನಲ್ಲಿದ್ದಾರೆ. 22 ಜನರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಒಬ್ಬರು ಕೋವಿಡ್ ಆರೈಕೆ ಕೇಂದ್ರದಲ್ಲಿದ್ದಾರೆ ಎಂದರು. ವಿಜಯಪುರ ನಗರದಲ್ಲಿ 12,098 ಪ್ರಕರಣಗಳ ಮೂಲಕ ಅತಿ ಹೆಚ್ಚು ಸೋಂಕಿತರು ದಾಖಲಾಗಿದ್ದಾರೆ. 529 ಪ್ರಕರಣಗಳೊಂದಿಗೆ ದೇವರಹಿಪ್ಪರಗಿಯಲ್ಲಿ ಅತಿ ಕಡಿಮೆ ಸೋಂಕಿತರು ಕಂಡು ಬಂದಿದ್ದಾರೆ.

ಇದುವರೆಗೂ 35,970 ಜನರು ಸೋಂಕು ದೃಢಪಟ್ಟಿದೆ. 35,314 ಜನರು ಗುಣಮುಖರಾಗಿದ್ದಾರೆ. 472 ಜನರು ಸಾವನ್ನಪ್ಪಿದ್ದಾರೆ. ಇನ್ನು 205 ಬ್ಲಾಕ್ ಫಂಗಸ್ ಪ್ರಕರಣಗಳು ಪತ್ತೆಯಾಗಿವೆ. ಇದರಲ್ಲಿ 123 ಜನರು ಗುಣಮುಖರಾಗಿದ್ದಾರೆ. ಇಬ್ಬರು ಮೃತಪಟ್ಟಿದ್ದಾರೆ. ಉಳಿದವರು ಚಿಕಿತ್ಸೆ ಪಡೆಯುತ್ತಿದ್ದಾರೆ ಅಂತಾ ತಿಳಿಸಿದ್ರು.

ಜಿಲ್ಲಾಡಳಿತ, ಸರ್ಕಾರಿ ಹಾಗೂ ಖಾಸಗಿ ಆಸ್ಪತ್ರೆಗಳ ಸಿಬ್ಬಂದಿ ಹಗಲು ರಾತ್ರಿ ಸೇವೆಯಲ್ಲಿ ತೊಡಗಿದ್ರಿಂದ ಶೂನ್ಯಕ್ಕೆ ಸೋಂಕು ತಲುಪಿದೆ. ಆದ್ರೆ, ಲಾಕ್ ಡೌನ್ ತೆರವಾದ ಬಳಿಕ ಜನರು ಮೈಮರೆತು ನಡೆದುಕೊಳ್ತಿದ್ದಾರೆ. ಕೋವಿಡ್ ಮಾರ್ಗಸೂಚಿಗಳನ್ನ ಪಾಲಿಸಬೇಕು ಎಂದರು.




Leave a Reply

Your email address will not be published. Required fields are marked *

error: Content is protected !!