ನಿರ್ಭಯ ಕೇಸ್ ಅಪರಾಧಿಗಳಿಗೆ ಲಾಸ್ಟ್ ಚಾನ್ಸ್: ರೆಡಿಯಾಗ್ತಿದೆ ನೇಣು ಕುಣಿಕೆ

514

ನವದೆಹಲಿ: 2012 ಡಿಸೆಂಬರ್ 12ರಂದ ರಾಷ್ಟ್ರ ರಾಜಧಾನಿಯಲ್ಲಿ ನಡೆದ ನಿರ್ಭಯ ಪ್ರಕರಣ ಇಡೀ ದೇಶವನ್ನ ತಲ್ಲಣಗೊಳಿಸಿತ್ತು. ಜಗತ್ತಿನ ಬೇರೆ ಬೇರೆ ಭಾಗಗಳಲ್ಲಿಯೂ ಅತ್ಯಾಚಾರಿಗಳ ವಿರುದ್ಧ ಕೂಗು ಕೇಳಿ ಬಂದಿತ್ತು. ಈ ಪ್ರಕರಣದ ಅಪರಾಧಿಗಳಿಗೆ ಮರಣದಂಡನೆ ಶಿಕ್ಷೆ ವಿಧಿಸಲಾಗಿದೆ. ಇದರ ಕಾಲ ಸಮೀಪಿಸ್ತಿದೆ.

ಅಕ್ಟೋಬರ್ 28ರಂದು ತಿಹಾರ್ ಜೈಲ್ ಅಧಿಕಾರಿಗಳು ಅಪರಾಧಿಗಳಿಗೆ ನೋಟಿಸ್ ನೀಡಿದ್ದಾರೆ. ನಾಲ್ವರು ಅಪರಾಧಿಗಳು ಏಳು ದಿನಗಳ ಒಳಗೆ ಶಿಕ್ಷೆಯ ವಿರುದ್ಧ ಮೇಲ್ಮನವಿ ಸಲ್ಲಿಸುವುದಕ್ಕೆ ಹಾಗೂ ಅದನ್ನ ಪುನರ್ ಪರಿಶೀಲನೆಗೆ ಒಳಪಡಿಸಲು ಕೇಳುವುದಕ್ಕೆ ಅವಕಾಶವಿದ್ದು, ಅದನ್ನ ಮಾಡದೇ ಹೋದಲ್ಲಿ ತಿಹಾರ್ ಜೈಲಿನ ಅಧಿಕಾರಿಗಳು ಕಾನೂನು ರೀತಿ ಕ್ರಮಕ್ಕೆ ಮುಂದಾಗಲಿದ್ದಾರೆ.

ನಿರ್ಭಯ ರೇಪ್ ಮತ್ತು ಕೊಲೆ ಪ್ರಕರಣ ಸಂಬಂಧ ವಿಚಾರಣಾ ಕೋರ್ಟ್ ಮರಣದಂಡನೆ ವಿಧಿಸಿತ್ತು. ಇದನ್ನ ದೆಹಲಿ ಹೈ ಕೋರ್ಟ್ ಹಾಗೂ ಸುಪ್ರೀಂ ಕೋರ್ಟ್ ಎತ್ತಿ ಹಿಡಿದಿವೆ. ಹೀಗಾಗಿ ಶಿಕ್ಷೆಯ ಬಗ್ಗೆ ಅಪರಾಧಿಗಳಿಗೆ ತಿಳಿಸಲಾಗಿದ್ದು ಮೇಲ್ಮನವಿ ಸಲ್ಲಿಸಲು ಏಳು ದಿನಗಳ ಕಾಲಾವಕಾಶವಿದೆ ಅಂತಾ ತಿಳಿಸಿದೆ. ಇಲ್ದೇ ಹೋದ್ರೆ ಆದಷ್ಟು ಬೇಗ ನೇಣು ಕುಣಿಕೆ ರೆಡಿ ಮಾಡಲಾಗುತ್ತೆ ಎಂದು ತಿಹಾರ್ ಜೈಲಿನ ಅಧಿಕಾರಿಗಳು ತಿಳಿಸಿದ್ದಾರೆ.




Leave a Reply

Your email address will not be published. Required fields are marked *

error: Content is protected !!