ವಿಶ್ವಕಪ್: ಬ್ಲೂ ಬಾಯ್ಸ್ ಡ್ರೀಮ್ ಸಾಂಗ್ ಅಬ್ಬರ

243

ಪ್ರಜಾಸ್ತ್ರ ಕ್ರೀಡಾ ಸುದ್ದಿ

ಏಷ್ಯ ಕಪ್ 2023 ಟೂರ್ನಿಯಲ್ಲಿ ಭರ್ಜರಿ ಗೆಲುವು ಸಾಧಿಸಿ ದಾಖಲೆಯ 8ನೇ ಬಾರಿಗೆ ಏಷ್ಯ ಚಾಂಪಿಯನ್ಸ್ ಆಗಿರುವ ಟೀಂ ಇಂಡಿಯಾ, ಇದೀಗ ಏಕದಿನ ವಿಶ್ವಕಪ್ ಟೂರ್ನಿಗೆ ಸಜ್ಜಾಗುತ್ತಿದೆ. 1983ರಲ್ಲಿ ಕಪಿಲ್ ದೇವ್ ನಾಯಕತ್ವದಲ್ಲಿ, 2011ರಲ್ಲಿ ಧೋನಿ ನಾಯಕತ್ವದಲ್ಲಿ ಕಪ್ ಗೆದ್ದಿರುವ ಬ್ಲೂ ಬಾಯ್ಸ್ ಈಗ 3ನೇ ಬಾರಿಗೆ ಕಪ್ ಎತ್ತಿ ಹಿಡಿಯಲು ಪಟ ತೊಟ್ಟಿದ್ದಾರೆ.

ಇಂಪಾಸಿಬಲ್ ನಹೀ ಯೇ ಸಪ್ನಾ, 3 ಕಾ ಡ್ರೀಮ್ ಹೈ ಅಪ್ನಾ( ಕನಸು ಅಸಾಧ್ಯವೇನಲ್ಲ ಮೂರು ನಮ್ಮ ಕನಸು) ಅನ್ನೋ ರ್ಯಾಪ್ ಹಾಡು ಭರ್ಜರಿ ಸೌಂಡ್ ಮಾಡುತ್ತಿದೆ. ಟೀಂ ಇಂಡಿಯಾ ಆಟಗಾರರು, ಅಭಿಮಾನಿಗಳ ಜೋಶ್ ನಲ್ಲಿ ಹಾಡು ಮೂಡಿ ಬಂದಿದೆ. ವರ್ಲ್ಡ್ ಕಪ್ ಟೂರ್ನಿಗೆ ಇ್ನು 2 ವಾರ ಮಾತ್ರ ಬಾಕಿ ಉಳಿದಿದೆ. ಭಾರತ ಕ್ರಿಕೆಟ್ ತಂಡದ ಪ್ರಾಯೋಜಕತ್ವ ವಹಿಸಿರುವ ಅಡಿಡಾಸ್ ಜರ್ಸಿ ರಿಲೀಸ್ ಮಾಡಿದೆ.

ಇನ್ನು ದಿಲ್ ಜಶ್ನೆ ಬೋಲೆ ಅನ್ನೋ ಅಧಿಕೃತ ಹಾಡನ್ನು ಸಹ ಬಿಡುಗಡೆ ಮಾಡಲಾಗಿದೆ. ಇದರಲ್ಲಿ ಬಾಲಿವುಡ್ ನಟರು, ಕ್ರಿಕೆಟಿಗ ಚಹಲ್ ಪತ್ನಿ ಧನಶ್ರೀ ವರ್ಮಾ ಸಹ ಕಾಣಿಸಿಕೊಂಡಿದ್ದಾರೆ. ಭಾರತದಲ್ಲಿ ನಡೆಯಲಿರುವ 13ನೇ ಏಕದಿನ ವರ್ಲ್ಡ್ ಕಪ್ ಅಕ್ಟೋಬರ್ 5ರಿಂದ ನವೆಂಬರ್ 19ರ ತನಕ ನಡೆಯಲಿದೆ. 10 ತಂಡಗಳು ಸೆಣಸಾಟ ನಡೆಸಲಿವೆ.




Leave a Reply

Your email address will not be published. Required fields are marked *

error: Content is protected !!