ಪ್ರಜಾಸ್ತ್ರ ಸುದ್ದಿ
ಕೊಲ್ಕತ್ತಾ: ಪ್ರಧಾನಿ ಮೋದಿ ದೇಶದ ಮೊದಲ ಜಲ ಸುರಂಗ ಮೆಟ್ರೋವನ್ನು ಬುಧವಾರ ಉದ್ಘಾಟಿಸಿದರು. ಶಾಲಾ ವಿದ್ಯಾರ್ಥಿಗಳೊಂದಿಗೆ ಸಂಚರಿಸುವ ಮೂಲಕ ನೀರಿನೊಳಗಿನ ಸುರಂಗ ಮೆಟ್ರೋಗೆ ಚಾಲನೆ ನೀಡಿದರು.
ಹೂಗ್ಲಿ ನದಿಯೊಳಿಗೆ ಇದನ್ನು ನಿರ್ಮಿಸಲಾಗಿದೆ. ಇದರ ಉದ್ದ 520 ಮೀಟರ್ ಆಗಿದೆ. 45 ಸೆಕೆಂಡ್ ಗಳಲ್ಲಿ ಮೆಟ್ರೋ ಸಂಚರಿಸುತ್ತೆ. ಕೊಲ್ಕತ್ತಾದ ಪೂರ್ವ ಪಶ್ಚಿಮ ಕಾರಿಡಾರ್ ನ ಭಾಗವಾಗಿ ಜಲ ಸುರಂಗ ಮೆಟ್ರೋ ನಿರ್ಮಿಸಲಾಗಿದೆ.