9.8 ಲಕ್ಷ ದಂಡ ವಿಧಿಸಿದ ಪೊಲೀಸರು

408

ಗುಜರಾತ್: ಐಷಾರಾಮಿ ಕಾರ್ ಖರೀದಿಸಿ ಭರ್ಜರಿ ಶೋಕಿ ಮಾಡಲು ಹೋದ ಆಸಾಮಿಗೆ ಭರ್ಜರಿಯಾಗಿ ದಂಡ ಬಿದ್ದಿದೆ. ಅದು ಬರೋಬ್ಬರಿ 9 ಲಕ್ಷದ 80 ಸಾವಿರ ರೂಪಾಯಿ ದಂಡ ವಿಧಿಸಲಾಗಿದೆ.

ಅಹಮದಾಬಾದ್ ನ ಸಿಂಧು ಭವನ್ ರಸ್ತೆಯಲ್ಲಿ ಪೋರ್ಷೆ ಕಾರಿನ ಮಾಲೀಕ ಪೊಲೀಸರ ಕೈಗೆ ತಗ್ಲಾಹಾಕಿಕೊಂಡಿದ್ದಾನೆ. ಕಾರಿಗೆ ನಂಬರ್ ಪ್ಲೇಟ್ ಇಲ್ಲ. ಕಾರಿಗೆ ಸಂಬಂಧಿಸಿದ ದಾಖಲೆಗಳಿಲ್ಲ. ಡ್ರೈವಿಂಗ್ ಲೈಸನ್ಸ್ ಇಲ್ಲ. ಈ ಎಲ್ಲ ಕಾರಣಗಳಿಂದ ಬರೋಬ್ಬರಿ 9.8 ಲಕ್ಷ ರೂಪಾಯಿ ದಂಡ ವಿಧಿಸಲಾಗಿದೆ.

ಪೋರ್ಷೆ 911 ಕಾರಿನ ಬೆಲೆ 2 ಕೋಟಿ ಇದೆ. ಈ ಬಗ್ಗೆ ತೇಜಸ ಪಾಟೀಲ ಮಾತ್ನಾಡಿ, ಸಂಚಾರಿ ಪೊಲೀಸ್ರು ಸಿಲ್ವರ್ ಬಣ್ಣದ ಕಾರನ್ನ ತೆಡೆದು ನಿಲ್ಲಿಸಿದ್ರು. ಸೂಕ್ತ ದಾಖಲೆ, ನಂಬರ್ ಪ್ಲೇಟ್ ಇಲ್ಲದ ಕಾರಣ ದಂಡ ವಿಧಿಸಲಾಗಿದೆ. ಅದನ್ನ ಆರ್ ಟಿಒ ಆಫೀಸ್ ಗೆ ಕಟ್ಟಿ ರಶೀದಿ ಠಾಣೆಗೆ ತೆಗೆದುಕೊಂಡು ಬರಬೇಕೆಂದು ಹೇಳಿದ್ದಾರೆ. ದುಬಾರಿ ಕಾರಿಗೆ ದುಬಾರಿ ದಂಡವೇ ಎಂದು ಜನ ಮಾತ್ನಾಡಿಕೊಳ್ತಿದ್ದಾರೆ.

ಓದುಗರ ಗಮನಕ್ಕೆ



Leave a Reply

Your email address will not be published. Required fields are marked *

error: Content is protected !!