ಸಂಸತ್ ಮುಂದೆ ಯುವತಿಯ ಏಕಾಂಗಿ ಹೋರಾಟ

373

ನವದೆಹಲಿ: ಸಂಸತ್ ಭವನದ ಹತ್ತಿರ ಯುವತಿಯೊಬ್ಬಳು ಏಕಾಂಗಿಯಾಗಿ ಹೋರಾಟ ನಡೆಸಿದ ಘಟನೆ ನಡೆದಿದೆ. ಮಹಿಳೆಯರ ಮೇಲೆ ದೌರ್ಜನ್ಯ, ಅತ್ಯಾಚಾರ, ಹತ್ಯೆ ಅಂತಾ ಪ್ರಕರಣಗಳು ಹೆಚ್ಚುತ್ತಿದ್ದು, ಅವರಿಗೆ ಸೂಕ್ತ ರಕ್ಷಣೆ ನೀಡಬೇಕೆಂದು ಒತ್ತಾಯಿಸಿ ಏಕಾಂಗಿಯಾಗಿ ಹೋರಾಟ ನಡೆಸಿದ್ರು.

ಸಂಸತ್ ಸಮೀಪದ 2 ಹಾಗೂ 3ನೇ ನಂಬರ್ ಗೇಟ್ ಬಳಿ 20 ವರ್ಷದ ಅನು ದುಬೆ ಅನ್ನೋ ಯುವತಿ ಹೋರಾಟ ಶುರು ಮಾಡಿದ್ರು. ಈ ವೇಳೆ ಪೊಲೀಸ್ರು ಆಕೆ ಬಳಿ ತೆರಳಿ ಸಂಸತ್ ಮುಂದೆ ಪ್ರತಿಭಟನೆ ಮಾಡ್ಬೇಡಿ. ಜಂತರ್ ಮಂತರ್ ಬಳಿ ಹೋಗಿ ಪ್ರತಿಭಟನೆ ನಡೆಸಿ ಅಂತಾ ಹೇಳಿದ್ದಾರೆ. ಇದಕ್ಕೆ ಯುವತಿ ನಿರಾಕರಿಸಿದ್ದಾರೆ ಅಂತಾ ಪಾರ್ಲಿಮೆಂಟ್ ಸ್ಟ್ರೇಟ್ ಪೊಲೀಸ್ರು ತಿಳಿಸಿದ್ದಾರೆ.

ಇನ್ನು ಯುವತಿ ಕಾರಣ ತಿಳಿದ್ಮೇಲೆ ಪೊಲೀಸ್ರು ಆಕೆಯನ್ನ ಬಿಟ್ಟು ಕಳಿಸಿದ್ದಾರೆ. ಇದರ ನಡುವೆ ಯುವತಿಗೆ ಪೊಲೀಸ್ರು ಹೊಡೆದಿದ್ದಾರೆ ಎಂದು ದೆಹಲಿ ಮಹಿಳಾ ಆಯೋಗದ ಅಧ್ಯಕ್ಷೆ ಸ್ವಾತಿ ಮಾಲಿವಾಲ್ ಆರೋಪಿಸಿದ್ದಾರೆ. ಇದನ್ನ ಪೊಲೀಸ್ರು ನಿರಾಕರಿಸಿದ್ದಾರೆ.




Leave a Reply

Your email address will not be published. Required fields are marked *

error: Content is protected !!