ಮೂರಡಿ ವರ.. ಐದುವರೆ ಅಡಿ ವಧು

280

ಪ್ರಜಾಸ್ತ್ರ ಸುದ್ದಿ

ಅಹಮದಾಬಾದ್: ಇದು ನಿಜಕ್ಕೂ ಅಪರೂಪದ ಮದುವೆ. ಈ ಮದುವೆಗೆ ಬಂದ ಜನರು ಜೋಡಿಯನ್ನ ನೋಡಿ ಅಚ್ಚರಿ ಪಡುವುದರ ಜೊತೆಗೆ ಹರಸಿ ಹಾರೈಸಿದ್ದಾರೆ. ಈ ಫೋಟೋ ನೋಡಿದ ತಕ್ಷಣ ಏನು ವಿಶೇಷ ಅನ್ನೋದು ಗೊತ್ತಾಗುತ್ತೆ. ಅದು ಮೂರು ಅಡಿ ಎತ್ತರದ ವರನಿಗೆ ಐದುವರೆ ಅಡಿ ಎತ್ತರದ ವಧು ಇದ್ದಾಳೆ.

ಈ ವಿಶಿಷ್ಟವಾದ ಮದುವೆ ನಡೆದಿರುವುದು ಗುಜರಾತಿನ ಜುನಾಗಢ ನಗರದಲ್ಲಿ. 41 ವರ್ಷದ ರಮೇಶ ಜೊತೆಗೆ 29 ವರ್ಷದ ಶಾಂತಾ ಅನ್ನೋ ಯುವತಿಯ ಮದುವೆಯಾಗಿದೆ. ಶಾಂತಾ ಹುಟ್ಟು ಅಂಧೆಯಾಗಿದ್ದು, ಸೇವಾ ಯುವಕ ಮಂಡಳಿ ಹಾಸ್ಟಲ್ ನಲ್ಲಿ ವಾಸವಾಗಿದ್ದು ಬಿ.ಎಡ್ ಪದವೀಧರೆಯಾಗಿದ್ದಾರೆ.

ಇನ್ನು ಶಿಕ್ಷಕನಾಗಿರುವ ರಮೇಶ ಕುಳ್ಳನಾಗಿದ್ದಾರೆ. ಈ ಕಾರಣಕ್ಕೆ 41 ವರ್ಷವಾಗಿದ್ರೂ ಮದುವೆಯಾಗಿರ್ಲಿಲ್ಲ. ಶಾಂತಾ ಅಂಧೆ ಅನ್ನೋ ಕಾರಣಕ್ಕೆ ಮದುವೆ ಮಾಡಿಕೊಳ್ಳಲು ಯಾರೂ ಮುಂದೆ ಬಂದಿರ್ಲಿಲ್ಲ. ಇದೀಗ ಇವರಿಬ್ಬರಿಗೂ ಕಂಕಣ ಭಾಗ್ಯ ಕೂಡಿ ಬಂದಿದೆ. ಈ ವಿಶಿಷ್ಟ ಮದುವೆಗೆ ಬಂದವರು ಶುಭ ಕೋರಿದ್ದಾರೆ.




Leave a Reply

Your email address will not be published. Required fields are marked *

error: Content is protected !!