ಪತ್ರಕರ್ತರು ಖಳನಾಯಕರಲ್ಲ, ಕಥಾನಾಯಕರು: ಸಂತೋಷ ನವಲಗುಂದ

345

ಪ್ರಜಾಸ್ತ್ರ ಸುದ್ದಿ

ಸಿಂದಗಿ: ಪತ್ರಿಕೋದ್ಯಮ ಇಂದು ಸವಾಲಾಗಿದೆ. ರಾಜಕಾರಣಿಗಳು ಪತ್ರಕರ್ತರನ್ನು ಖಳನಾಯಕರಂತೆ ನೋಡುತ್ತಾರೆ. ಆದರೆ, ಪತ್ರಕರ್ತರು ಖಳನಾಯಕರಲ್ಲ ಕಥಾನಾಯಕರು ಎಂದು, ಯಡ್ರಾಮಿಯ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಸಂತೋಷ ನವಲಗುಂದ ಹೇಳಿದರು.

ಪಟ್ಟಣದ ಪಿಇಎಸ್ ಕಾಲೇಜಿನ ಸಹಯೋಗದೊಂದಿಗೆ ಪತ್ರಿಕಾ ದಿನಾಚರಣೆ ಹಾಗೂ ಪದಗ್ರಹಣ ಸಮಾರಂಭದಲ್ಲಿ ಉಪನ್ಯಾಸ ನೀಡಿದ ಅವರು, ದನಿಯಿಲ್ಲದವರಿಗೆ ದನಿಯಾಗಿ ಪತ್ರಕರ್ತರು ಕೆಲಸ ಮಾಡುತ್ತಿದ್ದಾರೆ. ಆದರೆ, ಅವರ ದನಿ ಮುಚ್ಚಿಸುವ ಕೆಲಸ ಪ್ರಜಾಪ್ರಭುತ್ವದ ಪರವಾಗಿದ್ದೇವೆ ಎಂದು ಹೇಳಿಕೊಳ್ಳುವ ಪ್ರಭುತ್ವವಾದಿಗಳಿಂದ ಆಗುತ್ತಿದೆ ಎಂದು ಆತಂಕ ವ್ಯಕ್ತಪಡಿಸಿದರು. ಕೆಲ ಹಿರಿಯ ಪತ್ರಕರ್ತರು ಸಹ ತಿರುಚುವ ಕೆಲಸ ಮಾಡುತ್ತಿದ್ದು, ಇದರಿಂದ ಮುಜುಗರವಾಗುತ್ತಿದೆ ಎಂದರು.

ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಶಾಸಕ ರಮೇಶ ಭೂಸನೂರ, ಪತ್ರಕರ್ತರು ಪ್ರಜಾಪ್ರಭುತ್ವದ ಜೀವಾಳ ಎಂದರು. ಪುರಸಭೆ ಸಿಎ ಜಾಗ ನೀಡಿದರೆ ಪತ್ರಿಕಾ ಭವನ ನಿರ್ಮಾಣಕ್ಕೆ ನಾನು ಅನುದಾನ ಕೊಡಿಸುತ್ತೇನೆ ಎಂದರು.

ಕಾನಿಪ ವಿಜಯಪುರದ ಉಪಾಧ್ಯಕ್ಷ ಇಂದುಶೇಖರ ಮಣೂರ, ತಾಲೂಕಿನ ನೂತನ ಪದಾಧಿಕಾರಿಗಳಿಗೆ ಪ್ರತಿಜ್ಞಾವಿಧಿ ಬೋಧಿಸಿದರು. ಜಿಲ್ಲಾಧ್ಯಕ್ಷ ಸಂಗಮೇಶ ಚೂರಿ, ಕಾರ್ಡ್ ವಿತರಿಸಿದರು. ಇದೆ ವೇಳೆ ಹಿರಿಯ ಪತ್ರಕರ್ತರಾದ ಕೆ.ಎಚ್ ಸೋಮಾಪೂರ, ಟಿ.ಕೆ ಮಲಗೊಂಡ, ವಿರೇಶ ಮಠಪತಿ, ಇತ್ತೀಚೆಗೆ ವಿವಿಧ ಪ್ರಶಸ್ತಿಗಳನ್ನು ಪಡೆದ ರಮೇಶ ಪೂಜಾರಿ, ಪಂಡಿತ ಯಂಪೂರೆ, ಇಸ್ಮಾಯಿಲ್ ಶೇಖ್ ಹಾಗೂ ಪತ್ರಿಕಾ ವಿತರಕರಾದ ನಿಂಗಣ್ಣ ಜಕ್ಕನಗೌಡರ, ನಿಂಗಣ್ಣ ಯಾಳಗಿ, ಗಂಗಾಧರ ಮಡಿಕೇಶ್ವರ ಅವರಿಗೆ ಸನ್ಮಾನಿಸಲಾಯಿತು.

ಇದೇ ವೇಳೆ ಇತ್ತೀಚೆಗೆ ನಿಧನರಾದ ಹಿರಿಯ ಪತ್ರಕರ್ತ ಮುರಗೇಶ ಹಿಟ್ಟಿ ಅವರಿಗೆ ಶ್ರದ್ಧಾಂಜಲಿ ಸಲ್ಲಿಸಲಾಯಿತು. ಕಾನಿಪ ತಾಲೂಕಾಧ್ಯಕ್ಷ ಆನಂದ ಶಾಬಾದಿ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಪ್ರಕಾಶ ಮೂಡಲಗಿ ಪ್ರಾರ್ಥನಾಗೀತೆ ಹಾಡಿದರು. ಗುರುರಾಜ ಮಠ ಸ್ವಾಗತಿಸಿದರು. ಮಹಾಂತೇಶ ನೂಲನವರ ನಿರೂಪಿಸಿದರು.

ಈ ವೇಳೆ ಪಿಇಎಸ್ ಕಾಲೇಜಿನ ಅಧ್ಯಕ್ಷ ಬಿ.ಪಿ ಕರ್ಜಗಿ, ಕಸಾಪ ತಾಲೂಕಾಧ್ಯಕ್ಷ ರಾಜಶೇಖರ ಕೂಚಬಾಳ, ಕಾನಿಪ ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ಮೋಹನ ಕುಲಕರ್ಣಿ, ಮಲ್ಲಿಕಾರ್ಜುನ ಕೆಂಭಾವಿ, ಕಾರ್ಯಕಾರಣಿ ಸದಸ್ಯ ಕೆ.ಕೆ ಕುಲಕರ್ಣಿ, ಕಾನಿಪ ತಾಲೂಕು ಉಪಾಧ್ಯಕ್ಷ ಮಲ್ಲಿಕಾರ್ಜುನ ಅಲ್ಲಾಪೂರ, ಪ್ರಧಾನ ಕಾರ್ಯದರ್ಶಿ ಭೀಮು ಎನ್.ಕೆಂಭಾವಿ, ಸಹ ಕಾರ್ಯದರ್ಶಿ ಚಂದ್ರಕಾಂತ ಸಿ.ಮಾವೂರ, ಖಜಾಂಚಿ ವಿಜಯಕುಮಾರ ಪತ್ತಾರ, ರವಿಚಂದ್ರ ಮಲ್ಲೇದ, ಗುಂಡು ಕುಲ್ಕರ್ಣಿ, ಗುರು ಬಿದರಿ, ಶಾಂತವೀರ ಹಿರೇಮಠ, ಸಿದ್ದಲಿಂಗ ಕಿಣಗಿ, ಅಂಬರೀಶ ಸುಣಗಾರ, ದಶವಂತ, ಸುದರ್ಶನ ಜಿಂಗಾಣಿ ಸೇರಿದಂತೆ ಕಾಲೇಜಿನ ಸಿಬ್ಬಂದಿ, ವಿದ್ಯಾರ್ಥಿಗಳು ಉಪಸ್ಥಿತರಿದ್ದರು.




Leave a Reply

Your email address will not be published. Required fields are marked *

error: Content is protected !!