ಪ್ರಜಾಸ್ತ್ರ ಸಿನಿಮಾ ಡೆಸ್ಕ್
ಬಾಹುಬಲಿ ಚಿತ್ರದ ಬಳಿಕ ಪ್ಯಾನ್ ಇಂಡಿಯಾ ನಟನಾದ ಪ್ರಭಾಸ್ ಅಭಿನಯದ ಲವ್, ಸಸ್ಪೆನ್ಸ್ ಥ್ರಿಲ್ಲರ್ ಮೂವಿ ರಾಧೆ ಶ್ಯಾಮ್ ನಾಳೆ ರಿಲೀಸ್ ಆಗುತ್ತಿದೆ. ತೆಲುಗು, ತಮಿಳು, ಕನ್ನಡ, ಹಿಂದಿ, ಮಲಿಯಾಳಂ, ಚೀನಿ ಹಾಗೂ ಜಪಾನೀಸ್ ಭಾಷೆಯಲ್ಲೂ ರಿಲೀಸ್ ಆಗುತ್ತಿದೆ.
ನಟ ಪ್ರಭಾಸ್ ಗೆ ಪೂಜಾ ಹೆಗಡೆ ಮೊದಲ ಬಾರಿಗೆ ಜೋಡಿಯಾಗಿ ಕಾಣಿಸಿಕೊಂಡಿದ್ದಾರೆ. ಈಗಾಗ್ಲೇ ಟ್ರೇಲರ್ ನೋಡಿದ ಸಿನಿ ಪ್ರೇಕ್ಷಕರು ಕಾತುರದಿಂದ ಕಾಯುತ್ತಿದ್ದಾರೆ. ರಾಧಾಕೃಷ್ಣ ಕುಮಾರ್ ಈ ಚಿತ್ರಕ್ಕೆ ಆ್ಯಕ್ಷನ್ ಕಟ್ ಹೇಳಿದ್ದಾರೆ.
ಪ್ರೀತಿಯ ಜೊತೆಗೆ ಯುದ್ಧದ ಕಥೆಯೊಂದು ಹೇಳುತ್ತಿದ್ದಾರೆ. ವಿಶ್ವಕಂಡ ಸೂಪರ್ ಹಿಟ್ ಸಿನಿಮಾ ಟೈಟಾನಿಕ್ ಶ್ಯಾಡೋ ಒಂದಿಷ್ಟು ಟ್ರೇಲರ್ ನಲ್ಲಿ ಕಂಡು ಬಂದಿದೆ. ನಾಳೆ ಎಲ್ಲ ಕುತೂಹಲಕ್ಕೂ ತೆರೆ ಬೀಳಲಿದೆ.