ರಾಮ ಸತ್ಯ, ನ್ಯಾಯದ ಪ್ರತೀಕ: ಮೋದಿ

418

ಪ್ರಜಾಸ್ತ್ರ ಸುದ್ದಿ

ಅಯೋಧ್ಯೆ: ಐತಿಹಾಸಿಕ ರಾಮ ಮಂದಿರ ನಿರ್ಮಾಣದ ಭೂಮಿ ಪೂಜೆ ಕಾರ್ಯಕ್ರಮ ಮುಗಿಸಿದ ನಂತರ, ಪ್ರಧಾನಿ ಮೋದಿ ಪಕ್ಕದಲ್ಲಿಯೇ ನಿರ್ಮಿಸಿರುವ ವೇದಿಕೆಗೆ ಆಗಮಿಸಿದ್ರು. ಈ ವೇಳೆ ನೂರಾರು ಜನ ಸಾಧು ಸಂತರು, ಗಣ್ಯರನ್ನುದ್ದೇಶಿಸಿ ಪ್ರಧಾನಿ ಮೋದಿ ಭಾಷಣ ಮಾಡಿದ್ರು.

ಪ್ರಧಾನಿ ಭಾಷಣಕ್ಕೂ ಮೊದಲು ಸಿಎಂ ಯೋಗಿ ಆದಿತ್ಯನಾಥ ಮಾತ್ನಾಡಿ, 5 ಶತಮಾನಗಳ, ನೂರಾರು ಕೋಟಿ ಭಾರತೀಯರ ಕನಸು ನನಸಾಗಿದೆ. ಸತತ 500 ವರ್ಷಗಳ ಸಂಘರ್ಷ, ರಾಜಕೀಯ ಹೋರಾಟದ ನಂತರ ಸಂವಿಧಾನಾತ್ಮಕ, ಕಾನೂನಾತ್ಮಕವಾಗಿ ಈ ಶುಭದಿನ ಆಚರಿಸಿದ್ದೇವೆ. ಇದಕ್ಕೆ ಕಾರಣರಾದ ಪ್ರಧಾನಿ ಮೋದಿ ಅವರಿಗೆ ತುಂಬಾ ಹೃದಯದ ಧನ್ಯವಾದಗಳು ಎಂದು ಹೇಳಿದ್ರು.

ಆರ್ ಎಸ್ಎಸ್ ಮುಖ್ಯಸ್ಥ ಮೋಹನ ಭಾಗವತ್ ಮಾತ್ನಾಡಿ, ಇಡೀ ದೇಶ ಆನಂದದಲ್ಲಿದೆ. ಭಾರತೀಯರಲ್ಲಿ ಆತ್ಮನಿರ್ಭಾರದ ಜೊತೆಗೆ ಆತ್ಮವಿಶ್ವಾಸ ನೀಡಿದೆ. ಎಲ್ಲರಲ್ಲಿಯೂ ರಾಮನಿದ್ದಾನೆ. ಎಲ್ಲರಿಗೂ ಒಳ್ಳೆಯದಾಗಲಿ. ಶಿಲಾನ್ಯಾಸ ನೆರವೇರಿಸಿದ್ದು ಖುಷಿಯಾಗಿದೆ ಎಂದರು. ರಾಮಜನ್ಮಭೂಮಿ ತೀರ್ಥಕ್ಷೇತ್ರ ಟ್ರಸ್ಟ್ ಅಧ್ಯಕ್ಷ ಮಹಾಂತ ನೃತ್ಯ ಗೋಪಾಲದಾಸ ಮಹಾರಾಜರು ಮಾತ್ನಾಡಿ, ಕೋಟ್ಯಾಂತರ ಭಾರತೀಯರ ಕನಸು ನನಸಾಗಿದೆ. ಇದು ಬರೀ ರಾಮಮಂದಿರ ನಿರ್ಮಾಣವಲ್ಲ. ರಾಮರಾಜ್ಯ ನಿರ್ಮಾಣದ ಕೆಲಸವಾಗಿದೆ ಎಂದಿದ್ದಾರೆ.

ಇದೇ ವೇಳೆ ಶಿಲಾನ್ಯಾಸದ ಶಿಲಾಫಲಕ, ರಾಮಮಂದಿರ ಅಂಚೆಚೀಟಿ ಬಿಡುಗಡೆ ಮಾಡಲಾಯ್ತು. ಇನ್ನು ಕರ್ನಾಟಕದಿಂದ ನಿರ್ಮಾಣವಾದ ಕೋದಂಡರಾಮನ ಉಡುಗರೆಯನ್ನ ಸಿಎಂ ಯೋಗಿ ಆದಿತ್ಯನಾಥ ಪ್ರಧಾನಿಗೆ ನೀಡಿದ್ರು.

ರಾಮನ ಘೋಷಣೆಯೊಂದಿಗೆ ಮಾತು ಶುರು ಮಾಡಿದ ಪ್ರಧಾನಿ ಮೋದಿ, ಈ ಘೋಷಣೆ ಬರೀ ಈ ನಗರದಲ್ಲಿ ಕೇಳಿ ಬರ್ತಿಲ್ಲ. ಇಡೀ ವಿಶ್ವದಲ್ಲಿರುವ  ಕೋಟ್ಯಾಂತರ ರಾಮ ಭಕ್ತರಿಂದ ಕೇಳಿ ಬರ್ತಿದೆ ಎಂದರು. ನಾನು ಹೃದಯಪೂರ್ವಕವಾಗಿ ರಾಮಜನ್ಮಭೂಮಿ ತೀರ್ಥಕ್ಷೇತ್ರ ಟ್ರಸ್ಟ್ ಗೆ ಅಭಿನಂದನೆ ಸಲ್ಲಿಸುತ್ತೇನೆ. ಈ ಕ್ಷಣಕ್ಕೆ ಸಾಕ್ಷಿಯಾಗುವುದಕ್ಕೆ ನನ್ಗೆ ಅವಕಾಶ ಕೊಟ್ಟಿದ್ದಕ್ಕೆ ಆಭಾರಿಯಾಗಿದ್ದೇನೆ ಎಂದರು. ಇವತ್ತು ಇಡೀ ಭಾರತ ರಾಮಮಯವಾಗಿದೆ. ಭಾವುಕವಾಗಿದೆ. ಇಂಥಾ ಶುಭ ದಿನ ನೋಡುವ ಬಗ್ಗೆ  ಕೋಟ್ಯಾಂತರ ಜನರಿಗೆ ನಂಬಿಕೆ ಇರ್ಲಿಲ್ಲ. ಈಗ ಭವ್ಯ ರಾಮ ಮಂದಿರ ನಿರ್ಮಾಣವಾಗ್ತಿದೆ.

ರಾಮಜನ್ಮಭೂಮಿ ಇದೀಗ ಮುಕ್ತವಾಗಿದೆ. ಭಾಸ್ಕರನ ಸನ್ನಿಧಿಯಲ್ಲಿ ಸರಯೂ ನದಿಯ ತಟದಲ್ಲಿ ಸ್ವರ್ಣ ಅಧ್ಯಾಯ ಶುರುವಾಗ್ತಿದೆ. ಸ್ವಾತಂತ್ರ್ಯಕ್ಕಾಗಿ ಬಲಿದಾನವಾಗಿದೆ. ರಾಮ ಮಂದಿರಕ್ಕಾಗಿ ಹಲವರ ಸಮರ್ಪಣೆಯಿದೆ. ತ್ಯಾಗ, ಬಲಿದಾನ, ಸಂಘರ್ಷ, ತಪ್ಪಸ್ಸು, ಶಪಥದ ಫಲವಾಗಿ ಕನಸು ನನಸಾಗಿದೆ. ಈ ವೇಳೆ 130 ಕೋಟಿ ಜನರಿಗೆ ನಮಸ್ಕಾರ ಮಾಡುತ್ತೇನೆ. ಶ್ರೀರಾಮ ಭಾರತದ ಮರ್ಯಾದಾ ಪುರುಷೋತ್ತಮನಾಗಿದ್ದೇನೆ ಎಂದರು.

ರಾಮ ಮಂದಿರ ಭೂಮಿ ಪೂಜೆಗೂ ಮೊದಲು ಹನುಮಾನ ದರ್ಶನ ಪಡೆದಿದ್ದೇನೆ. ಎಲ್ಲಿ ರಾಮ ಇರುತ್ತಾನೋ ಅಲ್ಲಿ ಹನುಮನಿರುತ್ತಾನೆ ಎಂದರು. ಈ ಮಂದಿರ ರಾಷ್ಟ್ರೀಯ ಪ್ರತೀಕ, ಕೋಟ್ಯಾಂತರ ಜನರ ಸಂಕಲ್ಪದ ಪ್ರತೀಕ. ಮಂದಿರ ನಿರ್ಮಾಣವಾದ್ಮೇಲೆ ಬರೀ ಭವ್ಯವಾಗಿರುವುದಿಲ್ಲ. ತಂತ್ರಾತಿಕವಾಗಿಯೂ ಇರುತ್ತೆ. ರಾಮ ಸೀತಾಮಾತೆಯ ದರ್ಶನಕ್ಕಾಗಿ ವಿಶ್ವದ ಮೂಲೆ ಮೂಲೆಯಿಂದ ಭಕ್ತರು ಬರಲಿದ್ದಾರೆ. ಆರ್ಥಿಕವಾಗಿ ತೆರೆದುಕೊಳ್ಳಲಿದೆ. ಹಲವು ಅವಕಾಶಗಳು ದೊರೆಯಲಿವೆ. ಇವತ್ತಿನ ದಿನ ಕೋಟ್ಯಾಂತರ ರಾಮ ಭಕ್ತರ ಸಂಕಲ್ಪ. ಸತ್ಯ, ನ್ಯಾಯ, ಬಲಿದಾನದ ಪ್ರತೀಕ ಎಂದರು.

ಮುಸ್ಲಿರಂ ಹೆಚ್ಚಿರುವ ಇಂಡೋನೇಷಿಯಾದಲ್ಲಿಯೂ ರಾಮಾಯಣವಿದೆ. ಥೈಲ್ಯಾಂಡ್, ಮಲೇಷಿಯಾ, ಕಾಂಬೋಡಿಯಾ ಇರಾನ್, ಚೀನಾ, ಶ್ರೀಲಂಕಾ, ನೇಪಾಳ ಸೇರಿದಂತೆ ಅದೆಷ್ಟೋ ದೇಶಗಳಲ್ಲಿ ರಾಮನಿದ್ದಾನೆ. ಕನ್ನಡದಲ್ಲಿ ಸುಮದೇಂಧು ರಾಮಾಯಣವಿದೆ. ತಮಿಳಿನಲ್ಲಿ ಕಂಬರಾಮಾಯಣವಿದೆ. ಬೇರೆ ಬೇರೆ ಭಾಷೆಗಳಲ್ಲಿ ಬೇರೆ ಬೇರೆ ಹೆಸರಿನ ರಾಮಾಯಣವಿದೆ. ವಾಲ್ಮೀಕಿ ಕಾಲದ ರಾಮ, ತುಳಿಸಿದಾಸರು, ಕಬೀರದಾಸರ ರಾಮ, ಗಾಂಧಿ, ಬುದ್ಧರ ರಾಮ ಹಲವು ಸ್ವರೂಪಗಳಲ್ಲಿ ದರ್ಶನ ನೀಡ್ತಾರೆ. ದೀನ ದಲಿತರು ಸೇರಿದಂತೆ ಎಲ್ಲವರ್ಗದ ಜನರ ಪ್ರತೀಕವಾಗಿ ರಾಮನಿದ್ದಾನೆ ಎಂದ ಅವರು, ರಾಮ, ಸೀತಾ, ತಾಯಿ ಜಾನಕಿ ದೇಶದ ಜನತೆಗೆ ಆಯುಷ್ಯ, ಆರೋಗ್ಯ ಕರುಣಿಸಲಿ ಎಂದು ಹೇಳಿದ್ರು.




Leave a Reply

Your email address will not be published. Required fields are marked *

error: Content is protected !!