ಹುಬ್ಬಳ್ಳಿಯ ರವಾ ಮಿಲ್ ನಲ್ಲಿ ಬೆಂಕಿ ಅನಾಹುತ

240

ಪ್ರಜಾಸ್ತ್ರ ಸುದ್ದಿ

ಹುಬ್ಬಳ್ಳಿ: ನಗರದ ವೀರಾಪೂರ ಓಣಿಯಲ್ಲಿರುವ ರವಾ ಮಿಲ್‍ ನಲ್ಲಿ ಬೆಂಕಿ ಅನಾಹುತ ಸಂಭವಿಸಿದೆ. ಮಿಲ್ ನ ಮೊದಲ ಮಹಡಿಯಲ್ಲಿ ಆಕಸ್ಮಿಕ ಬೆಂಕಿ ಅವಗಡ ಸಂಭವಿಸಿದೆ. ಟಿ.ಕೆ ಹಬೀಬ್ ರವಾ ಮಿಲ್‍ ನಲ್ಲಿ ಈ ಅನಾಹುತ ನಡೆದಿದ್ದು, ಲಕ್ಷಾಂತರ ರೂಪಾಯಿ ಮೌಲ್ಯದ ವಸ್ತುಗಳು ಹಾನಿಯಾಗಿವೆ.

ಕಟ್ಟಡದ ಮೇಲ್ಬಾಗದಲ್ಲಿ ಸಣ್ಣ ಪ್ರಮಾಣದಲ್ಲಿ ಹತ್ತಿದ ಬೆಂಕಿಯೂ ಎಲ್ಲ ಕಡೆಯೂ ಆವರಿಸಿತ್ತು. ಬಳಿಕ ಕಿಟಕಿ ಮೂಲಕ ಬೆಂಕಿ ಕೆನ್ನಾಲಿಗೆ ಎಲ್ಲೆಡೆ ಚಾಚಿಕೊಂಡಿದೆ. ವಿಷಯ ತಿಳಿದು ಘಟನಾ ಸ್ಥಳಕ್ಕೆ ಆಗಮಿಸಿದ ಅಗ್ನಿಶಾಮಕ ದಳದ ಸಿಬ್ಬಂದಿ ಹಾಗೂ ಪೊಲೀಸರು ಒಂದೂವರೆ ಗಂಟೆಗಳ ಕಾಲ ಕಾರ್ಯಾಚರಣೆ ನಡೆಸಿ, ಬೆಂಕಿ ನಂದಿಸುವಲ್ಲಿ ಯಶಸ್ವಿಯಾದರು.




Leave a Reply

Your email address will not be published. Required fields are marked *

error: Content is protected !!