ರೆಮ್ ಡಿಸಿವರ್ ಮಾರಾಟ: ಪ್ರೇಮಿಗಳು ಅರೆಸ್ಟ್

223

ಪ್ರಜಾಸ್ತ್ರ ಸುದ್ದಿ

ಹುಬ್ಬಳ್ಳಿ: ಅಕ್ರಮವಾಗಿ ರೆಮ್ ಡಿಸಿವರ್ ಮಾರಾಟ ಮಾಡ್ತಿದ್ದ ಪ್ರೇಮಿಗಳನ್ನ ಸಿಸಿಬಿ ಪೊಲೀಸರು ಬಂಧಿಸಿದ್ದಾರೆ. ವೆಂಕಟೇಶ್ವರ ಬಡಾವಣೆಯ ಸಿದ್ದನಗೌಡ ಪಾಟೀಲ ಹಾಗೂ ವಿನಾಯಕ ನಗರದ ರಿಯಾ ಬಂಧಿತ ಆರೋಪಿಗಳಾಗಿದ್ದಾರೆ.

ಈ ಪ್ರೇಮಿಗಳು ಬೇರೆ ಬೇರೆ ಆಸ್ಪತ್ರೆಯಲ್ಲಿ ಕೆಲಸ ಮಾಡ್ತಿದ್ದಾರೆ. ರಿಯಾ ತಾನು ಕೆಲಸ ಮಾಡ್ತಿದ್ದ ಆಸ್ಪತ್ರೆಯಿಂದ ರೆಮ್ ಡಿಸಿವರ್ ಇಂಜಿಕ್ಷನ್ ಕದ್ದು ತಂದು ಪ್ರಿಯಕರ ಸಿದ್ದನಗೌಡನಿಗೆ ಕೊಟ್ಟಿದ್ದಾಳೆ. ಇದನ್ನ ಬೇರೆಯವರಿಗೆ ಮಾರಾಟ ಮಾಡಲು ಯತ್ನಿಸಿದಾಗ ಸಿಸಿಬಿ ಇನ್ಸ್ ಪೆಕ್ಟರ್ ಭರತ ರೆಡ್ಡಿ ನೇತೃತ್ವದಲ್ಲಿ ದಾಳಿ ನಡೆಸಿ ಬಂಧಿಸಲಾಗಿದೆ. ಈ ಕುರಿತು ಗೋಕುಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.




Leave a Reply

Your email address will not be published. Required fields are marked *

error: Content is protected !!