ಸಂತೆ ಕರವಸೂಲಿ ಟೆಂಡರ್ ಕ್ಯಾನ್ಸಲ್: ಸಿಂದಗಿ ಪುರಸಭೆಗೆ ಮುಖಭಂಗ

408

ಪ್ರಜಾಸ್ತ್ರ ಸುದ್ದಿ       

ಸಿಂದಗಿ: ಸಾಕಷ್ಟು ಗೊಂದಲದ ನಡುವೆಯೂ ಪಟ್ಟಣದ ಪುರಸಭೆ ವ್ಯಾಪ್ತಿಯಲ್ಲಿ ಸಂತೆ ಕರವಸೂಲಿ ಸಂಬಂಧ ಇಂದು ಟೆಂಡರ್ ಕರೆಯಲಾಗಿತ್ತು. ಪುರಸಭೆಯ ಸಭಾಂಗಣದಲ್ಲಿ ನಡೆದ ಟೆಂಡರ್ ಲಿಲಾವ್ ಪ್ರಕ್ರಿಯೆಯಲ್ಲಿ ಕೇವಲ 4 ಜನರು ಭಾಗವಹಿಸಿದ್ರು. ಪಿಕೆಪಿಎಸ್ ನ ಓರ್ವ ಸದಸ್ಯ ಹಾಗೂ ಇತರೆ ಮೂವರು ಟೆಂಡರ್ ನಲ್ಲಿ ಭಾಗವಹಿಸಿದ್ರು.

ಸರ್ಕಾರದ ಮೊತ್ತವೇ 15 ಲಕ್ಷದಿಂದ ಶುರುವಾಗಿದೆ. ಇದರ ಮೇಲೆ ಸವಾಲು ಕೂಗಲು ಹೇಳಲಾಯ್ತು. ಆದ್ರೆ, ಬಂದಿದ್ದ ನಾಲ್ಕು ಜನರಲ್ಲಿ ಯಾರೊಬ್ಬರು ಲಿಲಾವ್ ಕೂಗಲಿಲ್ಲ. ಹೀಗಾಗಿ ಟೆಂಡರ್ ಕ್ಯಾನ್ಸಲ್ ಮಾಡಲಾಗಿದೆ ಎಂದು ತಿಳಿಸಲಾಯ್ತು. ಮುಂದಿನ ಆರ್ಥಿಕ ವರ್ಷದಲ್ಲಿ ಟೆಂಡರ್ ಕರೆಯುವ ಕುರಿತು ತಿಳಿಸಲಾಗಿದೆ.

ಸಂತೆ ಕರವಸೂಲಿ ಲಿಲಾವ್ ಇದೆ ಮೊದಲ ಬಾರಿಗೆ ಕ್ಯಾನ್ಸಲ್ ಆಗಿದೆ ಎಂದು ಹೇಳಲಾಗ್ತಿದೆ. ತರಾತುರಿಯಲ್ಲಿ ಸಾರ್ವಜನಿಕರಿಗೆ ಕೇವಲ 1 ದಿನದ ಸಮಯ ನೀಡಿ, ಲಿಲಾವ್ ಪ್ರಕ್ರಿಯೆ ಶುರು ಮಾಡಿದ ಪುರಸಭೆ ಅಧಿಕಾರಿಗಳಿಗೆ ಮುಖಭಂಗವಾಗಿದೆ. ಇದು ನಿಜಕ್ಕೂ ಅವಮಾನದ ಸಂಗತಿ ಎಂದು ಹೇಳಲಾಗ್ತಿದೆ. ಇನ್ನು ಲಿಲಾವ್ ಪ್ರಕ್ರಿಯೆಯಲ್ಲಿ ಉಪವಿಭಾಗಾಧಿಕಾರಿ ಸ್ನೇಹಲ್ ಲೋಖಂಡೆ, ತಹಶೀಲ್ದಾರ್ ಸಂಜೀವಕುಮಾರ ದಾಸರ, ಪುರಸಭೆ ಮುಖ್ಯಾಧಿಕಾರಿ ಸುರೇಶ ನಾಯಕ, ಸಿಬ್ಬಂದಿ ಸೇರಿದಂತೆ ಪುರಸಭೆ ಸದಸ್ಯರು ಭಾಗವಹಿಸಿದ್ರು.




Leave a Reply

Your email address will not be published. Required fields are marked *

error: Content is protected !!