ಸಾರಾಯಿ ಮುಕ್ತ ಓತಿಹಾಳ ಗ್ರಾಮಕ್ಕಾಗಿ ಮನವಿ

271

ಪ್ರಜಾಸ್ತ್ರ ಸುದ್ದಿ

ಸಿಂದಗಿ: ಗ್ರಾಮದಲ್ಲಿ ಎಲ್ಲೆಂದರಲ್ಲಿ ಮದ್ಯದ ಅಂಗಡಿಗಳು ತರೆಯಲಾಗಿದ್ದು, ಇದರಿಂದ ಸಾಕಷ್ಟು ಸಮಸ್ಯೆಯಾಗುತ್ತಿದೆ. ಕೂಡಲೇ ಇದಕ್ಕೆ ಕಡಿವಾಣ ಹಾಕಬೇಕು ಎಂದು ತಾಲೂಕಿನ ಓತಿಹಾಳ ಗ್ರಾಮದ ಶ್ರೀ ಸಿದ್ದಲಿಂಗೇಶ್ವರ ಮಠದ ಟ್ರಸ್ಟ್ ಹಾಗೂ ಕಮಿಟಿ ಪರವಾಗಿ ತಹಶೀಲ್ದಾರ್ ಗೆ ಮನವಿ ಸಲ್ಲಿಸಿದರು. ತಹಶ್ಲೀದಾರ್ ಪರವಾಗಿ ಶಿರಸ್ತೇದಾರ್ ಸುರೇಶ ಮ್ಯಾಗೇರಿ ಮನವಿ ಸ್ವೀಕರಿಸಿದರು.

ಮದ್ಯ ಮಾರಾಟದಿಂದಾಗಿ ಗ್ರಾಮದಲ್ಲಿ ಶಾಂತಿ ಹಾಳಾಗಿದೆ. ಕುಟುಂಬಸ್ಥರು ನೆಮ್ಮದಿ ಕಳೆದುಕೊಂಡಿದ್ದಾರೆ. ಇದರಿಂದಾಗಿ ಊರಿನಲ್ಲಿ ತಂಟೆ ತಕಾರರುಗಳು ಹೆಚ್ಚಾಗುತ್ತಿವೆ. ಹೀಗಾಗಿ ಸಂಬಂಧಪಟ್ಟ ಅಧಿಕಾರಿಗಳು ಅಕ್ರಮ ಸಾರಾಯಿ ಮಾರಾಟ ತಡೆಯುವಂತೆ ಕ್ರಮಕೈಗೊಳ್ಳಬೇಕು ಎಂದು ಅಬಕಾರಿ ಇಲಾಖೆ, ತಹಶೀಲ್ದಾರ್ ಹಾಗೂ ಪೊಲೀಸ್ ಇಲಾಖೆಗೆ ಸಮಸ್ತ ಓತಿಹಾಳ ಗ್ರಾಮಸ್ಥರ ಪರವಾಗಿ ಹಾಗೂ ಕಮಿಟಿಯ ಪರವಾಗಿ ಮನವಿಯನ್ನು ಸಲ್ಲಿಸಿದರು.

ಈ ಸಂದರ್ಭದಲ್ಲಿ ಕೇಸುರಾಯ ಮಕಣಾಪುರ, ಸಿದ್ದಲಿಂಗ ಮಹಾರಾಜರ ಕಮಿಟಿ ಕಾರ್ಯದರ್ಶಿ ಕಿರಣಕುಮಾರ ನಾಟಿಕಾರ, ಪ್ರಗತಿ ಪರ ರೈತ ನಾಗಪ್ಪ ಪೂಜಾರಿ, ಸರಕಾರಿ ಮಾದರಿ ಪ್ರಾಥಮಿಕ ಶಾಲೆಯ ಮಾಜಿ ಎಸ್ ಡಿಎಂಸಿ ಅಧ್ಯಕ್ಷ ಶಿವಾನಂದ ಸಾಲಿಮಠ, ಮಂಜುನಾಥ ಮಣುರ, ಶಿವಪುತ್ರ ಬೂದಿಹಾಳ ಸೇರಿ ಇತರರು ಹಾಜರಿದ್ದರು.




Leave a Reply

Your email address will not be published. Required fields are marked *

error: Content is protected !!