5 ಝೋನ್ ಮೂಲಕ ಬೆಂಗಳೂರಿನಲ್ಲಿ ಸೀಲ್ ಡೌನ್.. ಬೆಳಗಾವಿ, ಮಂಗಳೂರು ಪ್ಲಾನ್..?

308

ಬೆಂಗಳೂರು: ರಾಜಧಾನಿಯಲ್ಲಿ ಸೀಲ್ ಡೌನ್ ಚರ್ಚೆ ನಡೆದಿದೆ. ಬಿಬಿಎಂಪಿ ವ್ಯಾಪ್ತಿಯಲ್ಲಿ ಐದು ಝೋನ್ ಮೂಲಕ ಸೀಲ್ ಮಾಡಲು ಭರ್ಜರಿ ಪ್ಲಾನ್ ನಡೆದಿದೆ ಎಂದು ಹೇಳಲಾಗ್ತಿದೆ. ಬೆಂಗಳೂರಿನಲ್ಲಿ ಕರೋನಾ ಪಾಸಿಟಿವ್ ಹೆಚ್ಚಾಗ್ತಿದ್ದು, ಹೀಗಾಗಿ ಸೀಲ್ ಡೌನ್ ಚರ್ಚೆ ನಡೆದಿದೆ ಅನ್ನೋ ಮಾತುಗಳು ಕೇಳಿ ಬರ್ತಿವೆ.

ಬೆಂಗಳೂರು ಈಶಾನ್ಯ ಭಾಗದಲ್ಲಿ 18 ಕರೋನಾ ಕೇಸ್ ಪತ್ತೆಯಾಗಿದೆ. ಹೀಗಾಗಿ ಈ ಭಾಗದ ಸಂಜಯನಗರ, ಗಂಗಾನಗರ, ಹೆಬ್ಬಾಳ, ಗಂಗನಹಳ್ಳಿ, ವಸಂತನಗರ, ಸಂಪಿಗೆನಗರ, ನೀಲಸಂದ್ರ, ಅಗ್ರಾ, ಜೀವನಭೀಮನಗರ, ಸಿವಿ ರಾಮನ್ ನಗರ, ಬೆನ್ನಿಗನಹಳ್ಳಿ, ಬಾಣಸವಾಡಿ, ಹೆಚ್ ಬಿಆರ್ ಲೇಔಟ್, ನಾಗ್ವಾರದಲ್ಲಿ ಸೀಲ್ ಡೌನ್ ಮಾಡಲು ಯೋಚನೆ ಮಾಡಲಾಗ್ತಿದೆ ಎಂದು ಹೇಳಲಾಗ್ತಿದೆ.

ಇನ್ನು ಬೆಂಗಳೂರು ದಕ್ಷಿಣದಲ್ಲಿ 11 ಕೋವಿಡ್ ಪ್ರಕರಣ ಬೆಳಕಿಗೆ ಬಂದಿದೆ. ಹೀಗಾಗಿ ವಿಜಯನಗರ, ದೇಪಾಂಜಲಿನಗರ, ಹೊಸಕೇರಿಹಳ್ಳಿ, ಕುಮಾರಸ್ವಾಮಿ ಲೇಔಟ್, ಬಿಟಿಎಂ ಲೇಔಟ್, ಕೋರಮಂಗಲ, ಜೆಪಿ ನಗರ, ಕತ್ರಿಗುಪ್ಪೆ, ಪದ್ರಾಯನಪುರ, ಹೊಂಬೇಗೌಡ ನಗರ, ಸುಧಾಮನಗರಗಳಲ್ಲಿಯೂ ಸೀಲ್ ಡೌನ್ ಮಾಡುವ ಬಗ್ಗೆ ಚರ್ಚಿಸಲಾಗ್ತಿದೆಯಂತೆ. ಆದ್ರೆ, ಈ ಬಗ್ಗೆ ನಗರ ಪೊಲೀಸ್ ಆಯುಕ್ತ ಭಾಸ್ಕರ ರಾವ್ ಅವರು ಸ್ಪಷ್ಟನೆ ನೀಡಿದ್ದು, ಬೆಂಗಳೂರಿನಲ್ಲಿ ಸೀಲ್ ಡೌನ್ ಇಲ್ಲ ಎಂದಿದ್ದಾರೆ. ಹೀಗಾಗಿ ಈ ರೀತಿಯ ವಂದತಿಗಳಿಗೆ ಕಿವಿ ಕೊಡಬೇಡಿ ಅನ್ನೋ ಮಾತುಗಳನ್ನ ಟ್ವೀಟರ್ ಮೂಲಕ ಸ್ಪಷ್ಟಪಡಿಸಿದ್ದಾರೆ.

ಈ ಸೀಲ್ ಡೌನ್ ಪ್ಲಾನ್ ಮಂಗಳೂರು ಹಾಗೂ ಬೆಳಗಾವಿಗೂ ವಿಸ್ತರಣೆ ಮಾಡುವ ಬಗ್ಗೆ ಚರ್ಚೆ ನಡೆಸಲಾಗ್ತಿದೆ ಅನ್ನೋದು ಕೇಳಿ ಬರ್ತಿದೆ. ಆದ್ರೆ, ಈ ಬಗ್ಗೆ ಆಯಾ ಜಿಲ್ಲಾಧಿಕಾರಿಗಳಿಂದ ಯಾವುದೇ ಅಧಿಕೃತ ಘೋಷಣೆ ಹೊರ ಬಿದ್ದಿಲ್ಲ.




Leave a Reply

Your email address will not be published. Required fields are marked *

error: Content is protected !!