ವಿದ್ಯಾರ್ಥಿನಿ ಮೇಲೆ ಗುಂಡಿನ ದಾಳಿ: ಸಿಸಿಟಿವಿಯಲ್ಲಿ ಭಯಾನಕ ದೃಶ್ಯ ಸೆರೆ

609

ಪ್ರಜಾಸ್ತ್ರ ಅಪರಾಧ ಸುದ್ದಿ

ಹರಿಯಾಣ: ಕಾಲೇಜು ವಿದ್ಯಾರ್ಥಿನಿಯೊಬ್ಬಳ ಮೇಲೆ ಗುಂಡಿನ ದಾಳಿ ನಡೆಸಿರುವ ಘಟನೆ ಹರಿಯಾಣದ ಫರಿದಾಬಾದ್ ನಲ್ಲಿ ನಡೆದಿದೆ. 21 ವರ್ಷದ ನಿಖಿತಾ ತೋಮರ್ ಖದೀಮರ ಗುಂಡಿಗೆ ಬಲಿಯಾದ ಯುವತಿಯಾಗಿದ್ದಾಳೆ.

ಕಾಲೇಜಿನಿಂದ ಹೊರಗೆ ಬರುತ್ತಿದ್ದ ಯವತಿಯನ್ನ ಬಲವಂತವಾಗಿ ಎಳೆದುಕೊಂಡು ಕಾರಿನಲ್ಲಿ ಕೂರಿಸಲು ನೋಡಿದ್ದಾನೆ. ಯುವತಿ ಇದಕ್ಕೆ ವಿರೋಧ ವ್ಯಕ್ತಪಡಿಸಿದ್ದಾಳೆ. ಇದ್ರಿಂದ ಸಿಟ್ಟಿಗೆದ್ದವನೇ ಯುವತಿಗೆ ಗುಂಡು ಹಾರಿಸಿದ್ದಾನೆ. ಇವನಿಗೆ ಮತ್ತೊಬ್ಬ ಸಾಥ್ ಕೊಟ್ಟಿದ್ದಾನೆ.

ಯುವತಿ ಮೇಲೆ ಗುಂಡು ಹಾರಿಸಿರುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಈ ಭಯಾನಕ ವಿಡಿಯೋ ಈಗ ಭಾರಿ ವೈರಲ್ ಆಗಿದೆ. ಇದೀಗ ತೌಫಿಕ್ ಅನ್ನೋ ಆರೋಪಿಯನ್ನ ಬಂಧಿಸಲಾಗಿದೆ. ಇನ್ನೊಬ್ಬನಿಗಾಗಿ ಹುಡುಕಾಟ ನಡೆದಿದೆ. ಸಿಕ್ಕಿಬಿದ್ದವನು ಯುವತಿಗೆ ಪರಿಚಯಸ್ಥನೆಂದು ಹೇಳಲಾಗ್ತಿದೆ.




Leave a Reply

Your email address will not be published. Required fields are marked *

error: Content is protected !!