ಸಿಂದಗಿಯಲ್ಲಿ ತ್ರಿಕೋನ ಸ್ಪರ್ಧೆ..!

282

ಪ್ರಜಾಸ್ತ್ರ ಸುದ್ದಿ

ಸಿಂದಗಿ: ವಿಧಾನಸಭೆ ಉಪ‌ ಚುನಾವಣೆಯ ಕಣ ರಂಗೇರುತ್ತಿದೆ. ಶುಕ್ರವಾರ ನಾಮಪತ್ರ ಸಲ್ಲಿಕೆ ಮುಗಿದಿದ್ದು, ಅಖಾಡದಲ್ಲಿ ಕಾಂಗ್ರೆಸ್, ಬಿಜೆಪಿ, ಜೆಡಿಎಸ್, ಕೆಆರ್ ಎಸ್ ಹಾಗೂ ಇಬ್ಬರು ಪಕ್ಷೇತರರು ಕಣದಲ್ಲಿದ್ದಾರೆ‌. ಆದರೆ, ಇದು ಬಹುತೇಕ ತ್ರಿಕೋನ ಕದನವಾಗಲಿದೆ.


ಎರಡು ರಾಷ್ಟ್ರೀಯ ಪಕ್ಷಗಳ ಅಭ್ಯರ್ಥಿಗಳು, ಪ್ರಾದೇಶಿಕ ಪಕ್ಷ ಜೆಡಿಎಸ್ ಅಭ್ಯರ್ಥಿ ಸಹ ಸ್ಥಳೀಯರು. ನೂತನ ಪಕ್ಷ ಕೆಆರ್ ಎಸ್ ಅಭ್ಯರ್ಥಿ ವಿಜಯಪುರ ನಗರದವರು. ಇನ್ನು ಪಕ್ಷೇತರ ಅಭ್ಯರ್ಥಿಗಳಿಬ್ಬರಲ್ಲಿ ಒಬ್ಬರು ಬೆಂಗಳೂರು ಮೂಲದವರು. ಇದೆಲ್ಲ ಗಮನಿಸಿದರೆ ಬಹುತೇಕ ತ್ರಿಕೋನ ಕದನವಾಗಲಿದೆ.
ಮತಕ್ಷೇತ್ರದಲ್ಲಿ ಭರ್ಜರಿ ಪ್ರಚಾರ ನಡೆಸಿದ್ದು, ಎಲ್ಲ ಪಕ್ಷಗಳ ನಡುವೆ ಜಿದ್ದಾಜಿದ್ದಿಯಿಂದ ಕೂಡಿದೆ. ಹೀಗಾಗಿ ಉಪ ಕದನದಲ್ಲಿ ಯಾರಿಗೆ ಗೆಲುವಾಗುತ್ತೆ ಅನ್ನೋ ಕುತೂಹಲ ಜನರಲ್ಲಿ ಮೂಡಿದೆ.

ಕಾಂಗ್ರೆಸ್ ನಿಂದ ಅಶೋಕ ಮನಗೂಳಿ, ಬಿಜೆಪಿಯಿಂದ ರಮೇಶ ಭೂಸನೂರ, ಜೆಡಿಎಸ್ ನಿಂದ ನಾಜಿಯಾ ಶಕೀಲ್ ಅಂಗಡಿ, ಕೆಆರ್ ಎಸ್ ನಿಂದ ಡಾ.ಸುನೀಲಕುಮಾರ್ ಹಬ್ಬಿ, ಪಕ್ಷೇತ್ರ ಅಭ್ಯರ್ಥಿ ದೀಪಾ ಅವರು ಕಣದಲ್ಲಿದ್ದು, ರಾಜ್ಯ ನಾಯಕರು ಸೇರಿದಂತೆ ಸ್ಥಳೀಯ ನಾಯಕರ ಪ್ರಚಾರ ಜೋರಾಗಿದೆ.


TAG


Leave a Reply

Your email address will not be published. Required fields are marked *

error: Content is protected !!