ಚರಣ್ ಜೀತ್ ಸಿಂಗ್ ಪಂಜಾಬ್ ನೂತನ ಸಿಎಂ

219

ಪ್ರಜಾಸ್ತ್ರ ಸುದ್ದಿ

ಚಂಡೀಗಡ: ಪಂಜಾಬ್ ನೂತನ ಮುಖ್ಯಮಂತ್ರಿಯಾಗಿ ಚರಣ್ ಜೀತ್ ಸಿಂಗ್ ಚನ್ನಿ ಸೋಮವಾರ ಪ್ರಮಾಣ ವಚನ ಸ್ವೀಕರಿಸಿದರು. ಅಮರಿಂದರ್ ಸಿಂಗ್ ರಾಜೀನಾಮೆ ಬಳಿಕ ಸಾಕಷ್ಟು ರಾಜಕೀಯ ಬೆಳವಣಿಗೆಗಳು ನಡೆದು, ಚರಣ್ ಜೀತ್ ಸಿಂಗ್ ಸಿಎಂ ಆಗಿ ಅಧಿಕಾರ ವಹಿಸಿಕೊಂಡರು.

ಸಾಮಾನ್ಯ ವ್ಯಕ್ತಿಯನ್ನು ಉನ್ನತ ಹುದ್ದೆಗೆ ಏರಿಸಿದ ಕಾಂಗ್ರೆಸ್ ಪಕ್ಷಕ್ಕೆ ನಾನು ಧನ್ಯವಾದಗಳನ್ನು ಹೇಳುತ್ತೇನೆ ಎಂದರು. ಬಡವರಿಗೆ ನೀರಿನ ಬಿಲ್ಲಾ ಮನ್ನಾ ಮಾಡುವ ಬಗ್ಗೆ ಪಕ್ಷದ ಮೊದಲ ಭರವಸೆ ಘೋಷಿಸಿದರು. ಇದು ಆಮ್ ಆದ್ಮಿ ಸರ್ಕಾರವಾಗಿದ್ದು, ಜನರ ಬಗ್ಗೆ ಮಾತನಾಡುತ್ತಲೇ ಇರುತ್ತೆ. ರೈತ ಹಾಗೂ ತುಳಿತಕ್ಕೊಳಗಾದವರ ಪ್ರತಿನಿಧಿಯಾಗುತ್ತೇನೆ ಎಂದರು.

ಈ ವೇಳೆ ಕಾಂಗ್ರೆಸ್ ಯುವ ನಾಯಕ ರಾಹುಲ್ ಗಾಂಧಿ, ಪಂಜಾಬ್ ಉಸ್ತುವಾರಿ ಹರೀಶ್ ರಾವತ್, ನವಜೋತ್ ಸಿಂಗ್ ಸಿಧು ಸೇರಿದಂತೆ ಅನೇಕರು ಭಾಗವಹಿಸಿದ್ದರು.




Leave a Reply

Your email address will not be published. Required fields are marked *

error: Content is protected !!