ವರ್ಷದ ಏಕೈಕ ಸೂರ್ಯಗ್ರಹಣ ಗೋಚರ

379

ಚೀಲಿ: ಈ ವರ್ಷದ ಏಕೈಕ ಸೂರ್ಯಗ್ರಹಣ ಸಂಭವಿಸಿದೆ. ಚಿಲಿ ಹಾಗೂ ಅರ್ಜೆಂಟೀನಾ ದೇಶಗಳಲ್ಲಿ ಮಂಗಳವಾರ ಸೂರ್ಯಗ್ರಹಣ ಕಾಣಿಸಿಕೊಂಡಿದೆ. ಈ ಮೂಲಕ ಇದು ಈ ವರ್ಷದ ಏಕೈಕ ಸೂರ್ಯಗ್ರಹಣ ಕಾಣಿಸಿಕೊಂಡಂತಾಗಿದೆ.

ಭಾರತೀಯ ಕಾಲಮಾನದ ಪ್ರಕಾರ ನಿನ್ನೆ ರಾತ್ರಿ 10.30ರ ಸುಮಾರಿಗೆ ಕಾಣಿಸಿಕೊಂಡಿದೆ. ಸರಿಸುಮಾರು 4.3 ನಿಮಿಷಗಳ ಕಾಲ ಸೂರ್ಯಗ್ರಹಣ ಕಾಣಿಸಿದ್ದು, ನ್ಯೂಜಿಲೆಂಡ್ ಕರಾವಳಿ ಮೂಲಕ ಚಿಲಿ, ಅರ್ಜೆಂಟೀನಾ ಹಾಗೂ ದಕ್ಷಿಣ ಅಮೆರಿಕಾದಲ್ಲಿ ಮಾತ್ರ ಕಾಣಿಸಿಕೊಂಡಿದೆ.

ಹತ್ತು ವರ್ಷಗಳಲ್ಲಿ ಎರಡು ಸೂರ್ಯಗ್ರಹಣ ಕಂಡಿರುವ ಚಿಲಿ ದೇಶ 2020ರ ವೇಳೆಗೆ ಮತ್ತೊಂದು ಸೂರ್ಯಗ್ರಹಣಕ್ಕೆ ಸಾಕ್ಷಿಯಾಗಲಿದೆಯಂತೆ. 2020 ಡಿಸೆಂಬರ್ 14ರಂದು ಮತ್ತೊಂದು ಸೂರ್ಯಗ್ರಹಣ ಗೋಚರಿಸಲಿದೆಯಂತೆ.




Leave a Reply

Your email address will not be published. Required fields are marked *

error: Content is protected !!