ಕರೋನಾ ಗೆದ್ದಿರುವ ಎಸ್ಪಿಬಿಗೆ ವೆಂಟಿಲೇಟರ್ ನಲ್ಲಿ ಚಿಕಿತ್ಸೆ

328

ಪ್ರಜಾಸ್ತ್ರ ಸಿನಿಮಾ ಡೆಸ್ಕ್

ಖ್ಯಾತ ಹಿರಿಯ ಗಾಯಕ ಎಸ್.ಪಿ ಬಾಲಸುಬ್ರಹ್ಮಣ್ಯಂ ಅವರ ಕೋವಿಡ್ 19 ವರದಿ ನೆಗಟಿವ್ ಬಂದಿದೆ. ಆದ್ರೆ, ಅವರಿಗೆ ವೆಂಟಿಲೇಟರ್ ನಲ್ಲಿ ಚಿಕಿತ್ಸೆ ನೀಡಲಾಗ್ತಿದೆ ಎಂದು ಅವರ ಮಗ ತಿಳಿಸಿದ್ದಾರೆ.

ಪಿಸಿಯೋಥೆರಪಿಗೆ ಅವರು ಸ್ಪಂದಿಸ್ತಿದ್ದಾರೆ ಎಂದು ಹೇಳಲಾಗ್ತಿದೆ. 74 ವರ್ಷದ ಎಸ್ಪಿಬಿ ಆಗಸ್ಟ್ 5ರಂದು ಚೆನ್ನೈನ ಆಸ್ಪತ್ರೆಗೆ ದಾಖಲಾಗಿದ್ರು. ಮುಂದೆ ಆಗಸ್ಟ್ 22ರಂದು ವೆಂಟಿಲೇಟರ್ ನಲ್ಲಿ ಚಿಕಿತ್ಸೆ ನೀಡಲಾಗ್ತಿದೆ ಎಂದು ಹೇಳಲಾಯ್ತು. ಇದೀಗ ಕರೋನಾ ನೆಗಟಿವ್ ಬಂದಿದೆ ಎಂದು ಮಗ ಚರಣ ತಿಳಿಸಿದ್ದಾರೆ.

ಖ್ಯಾತ ಗಾಯಕ ತಮ್ಮ ಮಧುರ ಕಂಠದ ಮೂಲಕ ಕೋಟ್ಯಾಂತರ ಸಂಗೀತ ಪ್ರೇಮಿಗಳ ಮನಸ್ಸು ಕದ್ದವರು. ಎಸ್ಪಿಬಿ ಆರೋಗ್ಯಕ್ಕಾಗಿ ದೇಶ್ಯಾದ್ಯಂತ ಇರುವ ಅವರ ಅಭಿಮಾನಿಗಳು ಪ್ರಾರ್ಥನೆ ಮಾಡಿಕೊಂಡಿದ್ದಾರೆ. ಮಾಡಿಕೊಳ್ತಿದ್ದಾರೆ. ಅವರ ಪ್ರಾರ್ಥನೆ ಫಲ ನೀಡಲಿದೆ.




Leave a Reply

Your email address will not be published. Required fields are marked *

error: Content is protected !!