ಎಸ್ಟಿ ಪ್ರಮಾಣ ಪತ್ರಕ್ಕಾಗಿ ತಳವಾರ ಸಮಾಜದಿಂದ ವಿಭಿನ್ನ ಹೋರಾಟಕ್ಕೆ ಸಜ್ಜು

555

ಪ್ರಜಾಸ್ತ್ರ ಸುದ್ದಿ

ವಿಜಯಪುರ: ಪರಿಶಿಷ್ಟ ಪಂಗಡ ಮೀಸಲಾತಿ ವಿಚಾರಕ್ಕೆ ಸಂಬಂಧಿಸಿದಂತೆ ತಳವಾರ ಹಾಗೂ ಪರಿವಾರ ಸಮುದಾಯದವರು ವಿನೂತನ ಹೋರಾಟಕ್ಕೆ ಸಜ್ಜಾಗಿದ್ದಾರೆ. ಬುಡಕಟ್ಟು ವೇಷ ಧರಿಸಿ ಸರ್ಕಾರದ ವಿರುದ್ಧ ಆಗಷ್ಟ್ 31ರಂದು ವಿಜಯಪುರದಲ್ಲಿ ಪ್ರತಿಭಟನೆ ನಡೆಸಲು ಸಿದ್ಧರಾಗಿದ್ದು, ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗ್ತಿದೆ.

ಕೇಂದ್ರ ಸರ್ಕಾರ ಅಧಿಸೂಚನೆ ಹೊರಡಿಸಿದ್ರೂ ಸಹ ಕೆಲ ರಾಜಕಾರಣಿಗಳು, ಅಧಿಕಾರಿಗಳ ಕುತಂತ್ರದಿಂದ ತಳವಾರ ಹಾಗೂ ಪರಿವಾರ ಸಮಾಜಕ್ಕೆ ಪರಿಶಿಷ್ಟ ಪಂಗಡ ಪ್ರಮಾಣ ಪತ್ರ ನೀಡುತ್ತಿಲ್ಲ. ಇದನ್ನ ಖಂಡಿಸಿ ಆಗಸ್ಟ್ 31ರಂದು ಸಾವಿರಾರು ಜನರು ಬುಡಕಟ್ಟು ವೇಷ ಧರಿಸಿ ಹೋರಾಟ ಮಾಡಲು ಸಜ್ಜಾಗಿದ್ದೇವೆ ಎಂದು ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಹಾಕಿಕೊಳ್ಳಲಾಗಿದೆ.

ಬುಡಕಟ್ಟು ವೇಷ ಧರಿಸುವ ಮೂಲಕ, ನಾವು ಮೂಲ ಬುಡಕಟ್ಟು ಸಮುದಾಯದಿಂದ ಬಂದವರು. ಸಂವಿಧಾನಬದ್ಧವಾಗಿ ನಮ್ಗೆ ಸಿಗಬೇಕಾದ ಹಕ್ಕನ್ನ ನಮ್ಗೆ ನೀಡಿ ಎಂದು ಆಗ್ರಹಿಸಿದ್ದು, ವಿನೂತನ ಹೋರಾಟದ ಮೂಲಕ ಸರ್ಕಾರದ ಕಣ್ಣು ತೆರೆಸುವ ಕೆಲಸಕ್ಕೆ ಸಜ್ಜಾಗಿದ್ದಾರೆ.




Leave a Reply

Your email address will not be published. Required fields are marked *

error: Content is protected !!