ಬರಹಗಾರ, ಕೇಂದ್ರ ಮಾಜಿ ಸಚಿವ ವೀರೇಂದ್ರಕುಮಾರ ನಿಧನ

284

ಪ್ರಜಾಸ್ತ್ರ ಸುದ್ದಿ

ನವದೆಹಲಿ: ಬರಹಗಾರ, ಕೇಂದ್ರ ಮಾಜಿ ಸಚಿವ ವೀರೇಂದ್ರಕುಮಾರ ಕೋಳಿಕ್ಕೋಡ್ ಖಾಸಗಿ ಆಸ್ಪತ್ರೆಯಲ್ಲಿ ನಿಧನ ಹೊಂದಿದ್ದಾರೆ. 84 ವರ್ಷದ ವೀರೇಂದ್ರಕುಮಾರ, ಹೃದಯ ಸಂಬಂಧಿ ಕಾಯಿಲೆಯಿಂದ ಬಳಲುತ್ತಿದ್ದರು. ಹೃದಯಾಘಾತದಿಂದಾಗಿ ಸಾವನ್ನಪ್ಪಿರುವುದು ತಿಳಿದು ಬಂದಿದೆ.

ಕೇರಳದ ವೈನಾಡಿನ ಕಲ್ಪೇಟದ ಜೈನ ಕುಟುಂಬದಲ್ಲಿ ಜನಿಸಿದ ವೀರೇಂದ್ರಕುಮಾರ, 1968ರಲ್ಲಿ ಸಂಯುಕ್ತ ಸೋಷಿಲಿಸ್ಟ್ ಪಕ್ಷದ ಮೂಲಕ ಪಾಲಿಟಿಕ್ಸ್ ಗೆ ಎಂಟ್ರಿಯಾದ್ರು. ಲೋಕತಾಂತ್ರಿಕ ಜನತಾದಳದ ಅಧ್ಯಕ್ಷರಾಗಿದ್ದ ಇವರು, ಹಲವು ಹುದ್ದೆಗಳನ್ನ ನಿಭಾಯಿಸಿದ್ದಾರೆ. 1996ರಲ್ಲಿ ಸಂಸದರಾಗಿದ್ರು. ಮುಂದ್ರೆ ಕೇಂದ್ರದಲ್ಲಿ ಸಚಿವರಾದ್ರು.

ಇದರ ಜೊತೆಗೆ ಒಳ್ಳೆಯ ಬರಹಗಾರರಾಗಿದ್ರು. ಪತ್ರಿಕೋದ್ಯಮದ ನಂಟಿತ್ತು.  ನ್ಯೂಸ್ ಏಜೆನ್ಸಿಗಳಾದ ಪಿಟಿಐ, ಐಎನ್ಎಸ್ ಸಂಸ್ಥೆಗಳ ಅಧ್ಯಕ್ಷರಾಗಿದ್ರು. ಮಾತೃಭೂಮಿ ಪತ್ರಿಕೆಯ ವ್ಯವಸ್ಥಾಪಕ ನಿರ್ದೇಶಕರಾಗಿದ್ರು. ಇವರಿಗೆ ಕೇಂದ್ರ ಸಾಹಿತ್ಯ ಅಕಾಡಮಿ ಪ್ರಶಸ್ತಿ ಸೇರಿ ಹಲವು ಪುರಸ್ಕಾರಗಳು ದೊರೆತಿವೆ.




Leave a Reply

Your email address will not be published. Required fields are marked *

error: Content is protected !!