ವಿಡಿಯೋ ಕಾಲ್ ಮಾಡಿ ಹಣ ದೋಚಲು ಹೋದ್ಳು..

275

ಪ್ರಜಾಸ್ತ್ರ ಸುದ್ದಿ

ಹುಬ್ಬಳ್ಳಿ: ಸೋಷಿಯಲ್ ಮೀಡಿಯಾ ಮೂಲಕ ಪರಿಚಯ ಮಾಡಿಕೊಂಡು ಮೋಸ ಮಾಡ್ತಿರುವವರ ಸಂಖ್ಯೆ ಹೆಚ್ಚಾಗ್ತಿದೆ. ಅಮಾಯಕ ಹಣ್ಮಕ್ಕಳನ್ನ ಗಂಡ್ಮಕ್ಕಳು, ಗಂಡ್ಮಕ್ಕಳನ್ನ ಹೆಣ್ಮಕ್ಕಳು ಮೋಸ ಮಾಡ್ತಿರುವ ಪ್ರಕರಣಗಳು ದಿನದಿಂದ ದಿನಕ್ಕೆ ಹೆಚ್ಚಾಗ್ತಿವೆ. ಇಂತಹದ್ದೆ ಪ್ರಕರಣವೊಂದು ಹುಬ್ಬಳ್ಳಿಯಲ್ಲಿ ನಡೆದಿದೆ.

ಕೇಶ್ವಾಪುರದ ಗಜಾನನ ಎಂಬುವರನ್ನ ಫೇಸ್ ಬುಕ್ ಮೂಲಕ ರಿಯಾ ಶರ್ಮಾ ಅನ್ನೋ ಮಹಿಳೆ ಪರಿಚಯ ಮಾಡಿಕೊಂಡಿದ್ದಾಳೆ. ಬಳಿಕ ಫೋನ್ ನಂಬರ್ ಹಂಚಿಕೆಯಾಗಿದೆ. ಹೀಗಾಗಿ ವಾಟ್ಸಪ್ ವಿಡಿಯೋ ಕಾಲ್ ಮಾಡಿದ ಯುವತಿ ನಗ್ನವಾಗಿರುವ ಸ್ಥಿತಿಯಲ್ಲಿನ ದೃಶ್ಯಗಳನ್ನ ರೆಕಾರ್ಡ್ ಮಾಡಿಕೊಂಡಿದ್ದಾಳೆ.

ಹೀಗೆ ರೆಕಾರ್ಡ್ ಮಾಡಿಕೊಂಡಿರುವ ವಿಡಿಯೋವನ್ನ ಮುಂದಿಟ್ಟುಕೊಂಡು ಹಣಕ್ಕಾಗಿ ಬೇಡಿಕೆ ಇಟ್ಟಿದ್ದಾಳೆ. ಕೊಡದೆ ಹೋದ್ರೆ ವಿಡಿಯೋವನ್ನು ಸೋಷಿಯಲ್ ಮೀಡಿಯಾದಲ್ಲಿ ಅಪ್ಲೋಡ್ ಮಾಡುವುದಾಗಿ ಬೆದರಿಕೆ ಹಾಕಿದ್ದಾಳೆ. ಇದ್ರಿಂದ ಕಂಗಾಲಾದ ಗಜಾನನ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾನೆ.




Leave a Reply

Your email address will not be published. Required fields are marked *

error: Content is protected !!