‘ಮರಿ ಟೈಗರ್’ ಹುಟ್ಟು ಹಬ್ಬಕ್ಕೆ ‘ರಾಬರ್ಟ್’ ಫಸ್ಟ್ ಲುಕ್

334

ಪ್ರಜಾಸ್ತ್ರ ಸಿನಿಮಾ ಡೆಸ್ಕ್

ಸ್ಯಾಂಡಲ್ ವುಡ್ ಮರಿ ಟೈಗರ್ ವಿನೋದ ಪ್ರಭಾಕರ 40ನೇ ವರ್ಷದ ಹುಟ್ಟು ಹಬ್ಬವಿಂದು. ಅಭಿಮಾನಿಗಳು ತಮ್ಮ ನೆಚ್ಚಿನ ನಟನಿಗೆ ಶುಭಾಶಯಗಳನ್ನ ತಿಳಿಸ್ತಿದ್ದಾರೆ. ಇದರ ಜೊತೆಗೆ ಸಿನಿ ದುನಿಯಾದ ಮಂದಿ ಸಹ ವಿನೋದ ಪ್ರಭಾಕರಿಗೆ ವಿಶ್ ಮಾಡ್ತಿದ್ದಾರೆ.

ಇನ್ನು ಡಿ ಬಾಸ್ ದರ್ಶನ ಜೊತೆಗೆ ರಾಬರ್ಟ್ ಚಿತ್ರದಲ್ಲಿ ಕಾಣಿಸಿಕೊಂಡಿರುವ ವಿನೋದ ಪ್ರಭಾಕರ ಹುಟ್ಟು ಹಬ್ಬದ ಸಲುವಾಗಿ ಫಸ್ಟ್ ಲುಕ್ ರಿಲೀಸ್ ಮಾಡಲಾಗಿದೆ. ಈ ಮೂಲಕ ರಾಬರ್ಟ್ ಟೀಂ ಪೋಸ್ಟರ್ ಗಿಫ್ಟ್ ಮಾಡಿದೆ. 2008ರಲ್ಲಿ ಟೂನಿ ಚಿತ್ರದ ಮೂಲಕ ಬಣ್ಣದ ಲೋಕಕ್ಕೆ ವಿನೋದ ಎಂಟ್ರಿ ಕೊಟ್ಟಿದ್ದಾರೆ.

ನಿರ್ದೇಶಕ ತರುಣ ಸುಧೀರ ಆ್ಯಕ್ಷನ್ ಕಟ್ ಹೇಳ್ತಿರುವ ರಾಬರ್ಟ್ ಮೂವಿ ಸಿಕ್ಕಾಪಟ್ಟೆ ಕ್ರೇಜ್ ಕ್ರಿಯೇಟ್ ಆಗಿದೆ. ಅದರಲ್ಲೂ ಡಿ ಬಾಸ್ ಫ್ಯಾನ್ಸ್ ಚಿತ್ರ ರಿಲೀಸ್ ಗೆ ತುದಿಗಾಲ ಮೇಲೆ ನಿಂತು ಕಾಯ್ತಿದ್ದಾರೆ. ಈ ಬಗ್ಗೆ ನಿರ್ದೇಶಕರು ಆದಷ್ಟು ಬೇಗ ತಿಳಿಸಬೇಕಿದೆ.




Leave a Reply

Your email address will not be published. Required fields are marked *

error: Content is protected !!