ನೆಲ್ಸನ್ ಜೊತೆಯಾದ ಲಿಯೋನಿಲ್ಲಾ

297

ಪ್ರಜಾಸ್ತ್ರ ಸಿನಿಮಾ ಡೆಸ್ಕ್

ಮರಿ ಟೈಗರ್ ವಿನೋದ್ ಪ್ರಭಾಕರ್ ನಟನೆಯ ನೆಲ್ಸನ್ ಚಿತ್ರ ಸಿಕ್ಕಾಪಟ್ಟೆ ಸೌಂಡ್ ಮಾಡುತ್ತಿದೆ. ಈಗಾಗ್ಲೇ ಚಿತ್ರದ ಸಣ್ಣ ಝಲಕ್ ರಿಲೀಸ್ ಆಗಿದ್ದು, ನೋಡುಗರು ನಟ ವಿನೋದ್ ಪ್ರಭಾಕರ್ ಹೊಸ ಲುಕ್ ಗೆ ಬೋಲ್ಡ್ ಆಗಿದ್ದಾರೆ.

ಅರುಣ್ ಕುಮಾರ್ ನೆಲ್ಸನ್ ಚಿತ್ರಕ್ಕೆ ಆಕ್ಷನ್ ಕಟ್ ಹೇಳುತ್ತಿದ್ದಾರೆ. ಇದೀಗ ನಟ ವಿನೋದ್ ಪ್ರಭಾಕರ್ ಗೆ ಜೋಡಿಯಾಗಿ ನಟಿ ಲಿಯೋನಿಲ್ಲಾ ಶ್ವೇತಾ ಡಿಸೋಜಾ ಕಾಣಿಸಿಕೊಳ್ಳುತ್ತಿದ್ದಾರೆ. ನಾಯಕಿಯ ಜೊತೆಗಿನ ಶೂಟಿಂಗ್ ಭರದಿಂದ ಸಾಗಿದೆ. ಶೀಘ್ರದಲ್ಲೇ ಈ ಕುರಿತು ಹೊಸ ಅಪ್ ಡೇಟ್ ಸಿಗಲಿದೆ.

ವೈ ಚಿತ್ರದ ಮೂಲಕ ಬಾಲಿವುಡ್ ಎಂಟ್ರಿ ಕೊಟ್ಟ ನಟಿ ಲಿಯೋನಿಲ್ಲಾ ಶ್ವೇತಾ ಡಿಸೋಜಾ, ಕನ್ನಡದಲ್ಲಿ ಖಾಸಗಿ ಪುಟಗಳು, ಹೆಜ್ಜಾರು ಚಿತ್ರಗಳಲ್ಲಿ ನಟಿಸುತ್ತಿದ್ದಾರೆ. ಈಗ ನೆಲ್ಸನ್ ಚಿತ್ರ ತಂಡ ಸೇರಿಕೊಂಡಿದ್ದಾರೆ. 1960-90ರ ದಶಕದಲ್ಲಿ ಚಾಮರಾಜನಗರ ಜಿಲ್ಲೆಯಲ್ಲಿನ ಗ್ಯಾಂಗ್ ಸ್ಟರ್ ಗಳ ಕಥೆಯನ್ನು ಹೇಳಲು ಹೊರಟಿದ್ದಾರೆ ನಿರ್ದೇಶಕ ಅರುಣ್ ಕುಮಾರ್.




Leave a Reply

Your email address will not be published. Required fields are marked *

error: Content is protected !!