ಬೆಂಗಳೂರಿನಲ್ಲಿರುವ ಅಜ್ಜಿ ಮನೆಗೆ ನ್ಯೂಜಿಲೆಂಡ್ ಆಟಗಾರ ಭೇಟಿ

317

ಪ್ರಜಾಸ್ತ್ರ ಸುದ್ದಿ

ಬೆಂಗಳೂರು: ಏಕದಿನ ವಿಶ್ವಕಪ್ ನಲ್ಲಿ ಮಿಂಚುತ್ತಿರುವ ನ್ಯೂಜಿಲೆಂಡ್ ತಂಡದ ಆಟಗಾರ ರಚಿನ್ ರವೀಂದ್ರ ಮೂಲತಃ ಕರ್ನಾಟಕದ ಬೆಂಗಳೂರಿನವರು. ಇವರ ತಂದೆ ತಾಯಿ ಉದ್ಯೋಗದ ನಿಮಿತ್ತ ನ್ಯೂಜಿಲೆಂಡ್ ಗೆ ಹೋಗಿ ದಶಕಗಳಾಗಿವೆ. ಅಲ್ಲಿಯೇ ಹುಟ್ಟಿ ಬೆಳೆದಿರುವ ರಚಿನ್, ಇದೀಗ ಅಜ್ಜಿಯ ಮನೆಗೆ ಭೇಟಿ ನೀಡಿದ್ದಾರೆ.

ಗುರುವಾರ ಇಲ್ಲಿನ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಶ್ರೀಲಂಕಾ ವಿರುದ್ಧ ಪಂದ್ಯ ಆಡಿತು. ಹೀಗಾಗಿ ಬೆಂಗಳೂರಿನಲ್ಲಿರುವ ರಚಿನ್ ರವೀಂದ್ರ, ಅಜ್ಜಿಯನ್ನು ಭೇಟಿಯಾಗಿದ್ದಾರೆ. ಈ ವೇಳೆ ಮೊಮ್ಮಗನಿಗೆ ಅಜ್ಜಿ ದೃಷ್ಟಿ ತೆಗೆದಿದ್ದು ವೈರಲ್ ಆಗಿದೆ.

ಏಕದಿನ ವಿಶ್ವಕಪ್ ನಲ್ಲಿ ಭರ್ಜರಿಯಾಗಿ ಆಡುತ್ತಿರುವ ರಚಿನ್, ರನ್ ಗಳಿಕೆಯಲ್ಲಿ ಟಾಪ್ ನಲ್ಲಿದ್ದಾರೆ. ಲೀಗ್ ನ 9 ಪಂದ್ಯಗಳಿಂದ 565 ರನ್ ಗಳಿಸಿ ನಂಬರ್ 1 ಸ್ಥಾನದಲ್ಲಿದ್ದಾರೆ. ಇದರಲ್ಲಿ 3 ಶತಕ, 2 ಅರ್ಧ ಶತಕ ಇವೆ. ಸೌಥ್ ಆಫ್ರಿಕಾದ ಡಿಕಾಕ್ 8 ಪಂದ್ಯಗಳಿಂದ 4 ಶತಕ ಗಳಿಸಿದ್ದು, 550 ರನ್ ಗಳಿಂದ 2ನೇ ಸ್ಥಾನ, 8 ಪಂದ್ಯಗಳಿಂದ 543 ರನ್ ಗಳಿಸಿರುವ ಇಂಡಿಯಾದ ವಿರಾಟ್ ಕೊಹ್ಲಿ 3ನೇ ಸ್ಥಾನದಲ್ಲಿದ್ದಾರೆ. 2 ಶತಕ, 4 ಅರ್ಧ ಶತಕ ಬಾರಿಸಿದ್ದಾರೆ.




Leave a Reply

Your email address will not be published. Required fields are marked *

error: Content is protected !!