‘ನನ್ನ ರಾಜಕೀಯ ನಿವೃತ್ತಿ ಹೈಕಮಾಂಡ್ ಗೂ ಸಂಬಂಧವಿಲ್ಲ’

68

ಪ್ರಜಾಸ್ತ್ರ ಸುದ್ದಿ

ಬೆಂಗಳೂರು: ಮಾಜಿ ಸಿಎಂ, ಬಿಜೆಪಿ ಸಂಸದ ಡಿ.ವಿ ಸದಾನಂದಗೌಡ ಅವರು ಇತ್ತೀಚೆಗೆ ಚುನಾವಣಾ ರಾಜಕೀಯಕ್ಕೆ ನಿವೃತ್ತಿ ಘೋಷಿಸಿದ್ದಾರೆ. ಈ ಬಗ್ಗೆ ಹಲವು ಚರ್ಚೆಗಳು ನಡೆದವು. ಇದಕ್ಕೆ ಪ್ರತಿಕ್ರಿಯೆ ನೀಡಿದ ಮಾಜಿ ಸಿಎಂ ಯಡಿಯೂರಪ್ಪ ಹೈಕಮಾಂಡ್ ತೀರ್ಮಾನದಂತೆ ಸದಾನಂದಗೌಡರು ರಾಜೀನಾಮೆ ಘೋಷಿಸಿದ್ದಾರೆ ಎಂದರು. ಆದರೆ, ಇದೀಗ ನೋಡಿದರೆ ರಾಜಕೀಯ ಘೋಷಣೆ ನನ್ನ ಸ್ವಂತ ತೀರ್ಮಾನ. ಹೈಕಮಾಂಡ್ ಗೂ ಇದಕ್ಕೂ ಸಂಬಂಧವಿಲ್ಲ ಎಂದು ಸದಾನಂದಗೌಡ ಹೇಳಿದ್ದಾರೆ.

ರಾಜೀನಾಮೆ ಘೋಷಣೆ ಬಗ್ಗೆ ನಾನು ಯಾರೊಂದಿಗೆ ಚರ್ಚಿಸಿಲ್ಲ. ಟಿಕೆಟ್ ತಪ್ಪುವ ಭಯವೂ ಅಲ್ಲ. ಇದಕ್ಕೆ ಯಾರ ಒತ್ತಡವೂ ಇರಲಿಲ್ಲ. ನನ್ನ ಕುಟುಂಬಸ್ಥರೊಂದಿಗೆ ಚರ್ಚಿಸಿ ನಿರ್ಧಾರ ತೆಗೆದುಕೊಂಡಿದ್ದೇನೆ. 2019ರಲ್ಲಿ ನಿವೃತ್ತಿ ಬಗ್ಗೆ ಹೇಳಿದ್ದೆ, ಪಕ್ಷ, ಸಂಘ ಈ ಬಾರಿ ಸ್ಪರ್ಧಿಸು ಎಂದಿತ್ತು. ಈ ಬಗ್ಗೆ ನನ್ನ ಕುಟುಂಬಸ್ಥರು ಬಿಟ್ಟು ಬೇರೆ ಯಾರೊಂದಿಗೆ ಚರ್ಚಿಸಿಲ್ಲ. ಪ್ರಾಮಾಣಿಕವಾಗಿ ಕೆಲಸ ಮಾಡಿದ್ದೇನೆ. ರಾಜಕಾರಣದಲ್ಲಿ ನಾನೇ ಇರಬೇಕು. ನನ್ನ ಮಕ್ಕಳು ಇರಬೇಕು ಎಂದು ಇಷ್ಟಪಟ್ಟವನಲ್ಲ ಅಂತಾ ಹೇಳಿದ್ದಾರೆ.

ಇನ್ನು ಕೇಂದ್ರ ನಾಯಕರಿಗೆ ಮನವಿ ಮಾಡಿದ ಅವರು, ಕರ್ನಾಟಕವನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಿ. ವಿಧಾನಸಭೆ ಚುನಾವಣೆಯಲ್ಲಿ ಕಳೆದುಕೊಂಡರಬಹುದು. ಲೋಕಸಭೆಯಲ್ಲಿ ಡಬಲ್ ಕೊಡುತ್ತೇವೆ. ಪ್ರತಿಪಕ್ಷ ನಾಯಕನ ಆಯ್ಕೆ ಮಾಡದೆ ಹಾಗೇ ಬಿಡೋದು ಸರಿಯಿಲ್ಲ ಎಂದರು.
Leave a Reply

Your email address will not be published. Required fields are marked *

error: Content is protected !!