ರಾಜ್ಯಕ್ಕಿಲ್ಲ ಕೇಂದ್ರದ ನೆರವು: ಮಾತಿನ ಮಲ್ಲ 25 ಬಿಜೆಪಿ ಸಂಸದರು ಏನಾದ್ರು?

488

ಬೆಂಗಳೂರು: ಎಲ್ಲರ ಜೀವನ ಬುಡಮೇಲು ಮಾಡಿರುವ ಕರೋನಾ ವಿರುದ್ಧ ರಾಜ್ಯ ಸರ್ಕಾರ ಸಹ ಸಾಕಷ್ಟು ಪ್ರಯತ್ನ ಮಾಡ್ತಿದೆ. ಬಿ.ಎಸ್ ಯಡಿಯೂರಪ್ಪ ಸಿಎಂ ಆದ್ಮೇಲೆ ಒಂದರ ಮೇಲೆ ಒಂದು ಸಮಸ್ಯೆ ಬರ್ತಿದ್ದು ಎಲ್ಲವನ್ನ ಶಕ್ತಿ ಮೀರಿ ಎದುರಿಸ್ತಿದ್ದಾರೆ. ಆದ್ರೆ, ಇವರಿಗೆ ಕೇಂದ್ರದ ನೆರವು ಮಾತ್ರ ಸಿಗ್ತಿಲ್ಲ.

ರಾಜ್ಯದಿಂದ ಸಂಸತ್ತಿಗೆ 25 ಮಂದಿ ಬಿಜೆಪಿ ಸಂಸದರು ಆಯ್ಕೆಯಾಗಿದ್ದಾರೆ. 28 ಸ್ಥಾನಗಳಲ್ಲಿ 25 ಸ್ಥಾನ ಗೆಲ್ಲಿಸಿಕೊಟ್ಟ ಕರ್ನಾಟಕ್ಕೆ ಮೋದಿ ಸರ್ಕಾರ ಪದೆಪದೆ ಅನ್ಯಾಯ ಮಾಡ್ತಿದೆ. ಪ್ರವಾಹದ ಸಮಯದಲ್ಲಿಯೂ ಸರಿಯಾಗಿ ಹಣ ನೀಡಲಿಲ್ಲ. ತೆರಿಗೆ ಹಣದಲ್ಲಿಯೂ ಸರಿಯಾಗಿ ನೀಡಿಲ್ಲ. ಇದೀಗ ಕೋವಿಡ್ 19 ವಿಚಾರದಲ್ಲಿ ಮೋದಿ ಸರ್ಕಾರ ರಾಜ್ಯಕ್ಕೆ ಮೋಸ ಮಾಡ್ತಿದೆ. ಆದ್ರೆ, ಈ ಬಗ್ಗೆ 25 ಬಿಜೆಪಿ ಸಂಸದರು ಪ್ರಶ್ನಿಸುವ ಬದಲು ತುಟಿಗೆ ಬೀಗ ಹಾಕಿಕೊಂಡು ಕುಳ್ತಿದ್ದಾರೆ.

15ನೇ ಹಣಕಾಸು ಆಯೋಜನೆಯಂತೆ 13 ರಾಜ್ಯಗಳಿಗೆ 61,57,74.95 ಲಕ್ಷ ಕೋಟಿ ರೂಪಾಯಿ ಅನುದಾನ ಬಿಡುಗಡೆ ಮಾಡಿದೆ. ಆದ್ರೆ, ಕರ್ನಾಟಕ್ಕೆ ನಯಾಪೈಸಾ ಕೊಟ್ಟಿಲ್ಲ. ಈ ಬಗ್ಗೆ ಪ್ರಶ್ನೆ ಮಾಡಬೇಕಾದ 25 ಜನ ಸಂಸದರು ಮನೆಯಿಂದ ಹೊರಗೆ ಬರ್ತಿಲ್ಲ. ಬರೀ ಭಾಷಣ, ಬಣ ಪ್ರಚಾರ, ಪೋಸು, ಇಲ್ಲದ ಬಿಲ್ಡಪ್, ಕೋಮುಗಲಭೆ ಸೃಷ್ಟಿಸುವ ಹೇಳಿಕೆಗಳು.. ಇದನ್ನ ಚೆನ್ನಾಗಿ ಮಾಡಿಕೊಂಡು ಬರುತ್ತಿರುವ ಮಾತಿನ ಶೂರರಿಗೆ, ರಾಜ್ಯಕ್ಕೆ ನ್ಯಾಯಯುತವಾಗಿ ಬರಬೇಕಾದ ಅನುದಾನ ತರುವ ಯೋಗತ್ಯೆಯಿಲ್ಲ ಎಂದು ಜನ ಉಗಿಯುತ್ತಿದ್ದಾರೆ.

ರಾಜ್ಯಕ್ಕೆ ಪ್ರವಾಹದ ಹೊಡೆತ ಬಿದ್ದಾಗಲೂ ಇವರು ಕೆಲಸ ಮಾಡ್ಲಿಲ್ಲ. ಇದೀಗ ಕರೋನಾ ಟೈಂನಲ್ಲೂ ಕೆಲಸ ಮಾಡ್ತಿಲ್ಲ. ಜನರು ಟ್ಯಾಕ್ಸ್ ಕಟ್ಟಿದ ಸಂಸದರ ಅನುದಾನದ ಹಣವನ್ನ ಸಹ ಪಿಎಂ ಕೇರ್ಸ್ ಗೆ ದೇಣಿಗೆ ನೀಡಿ ಪೋಸ್ ಕೊಟ್ಟಿದ್ದಾರೆ. ಬಾಯಿ ಬಿಟ್ರೆ ಬೆಂಕಿ ಹಚ್ಚುವ ಮಾತ್ನಾಡುವ ಪ್ರತಾಪ ಸಿಂಹ, ತೇಜಸ್ವಿಸೂರ್ಯ, ಶೋಭಾ ಕರಂದ್ಲಾಜೆ, ಅನಂತಕುಮಾರ ಹೆಗಡೆ ಸೇರಿದಂತೆ ಎಲ್ಲರೂ ಸೈಲೆಂಟ್ ಆಗಿದ್ದಾರೆ. ಈ ಟೈಂನಲ್ಲಿ ಕೆಲಸ ಮಾಡ್ಲಿಲ್ಲಂದ್ರೆ ಇನ್ಯಾವ ಟೈಂನಲ್ಲಿ ಮಾಡ್ತಾರೆ ಇವರು. ಇದನ್ನ ನೋಡ್ತಿದ್ರೆ, ಕೇಂದ್ರ ಹಾಗೂ ಸಂಸದರಿಗೆ ಸಿಎಂ ಬಿ.ಎಸ್ ಯಡಿಯೂರಪ್ಪ ಬೇಡವಾದ ನಾಯಕ. ಹೀಗಾಗಿ ಮೂವರು ಕೇಂದ್ರ ಸಚಿವರು ಬೇರೆ ಇದ್ದೂ ಉಪಯೋಗಕ್ಕೆ ಬರುತ್ತಿಲ್ಲ. ಇಂತವರನ್ನ ಮುಂದಿನ ಸಾರಿ ನಾಡಿನ ಜನತೆ ಬುದ್ದಿ ಕೆಲಸಬೇಕಿದೆ.

ಬಿಜೆಪಿಯ 25 ಜನ ಸೈಲೆಂಟ್ ಸಂಸದರು ಇವರೆ ನೋಡಿ.

ನಂಬರ್ಲೋಕಸಭಾ ಕ್ಷೇತ್ರಸಂಸದರು
01 ಚಿಕ್ಕೋಡಿ ಅಣ್ಣಾಸಾಹೇಬ ಜೊಲ್ಲೆ
02 ಬೆಳಗಾವಿ ಸುರೇಶ ಅಂಗಡಿ
03 ಬಾಗಲಕೋಟೆ ಪಿ.ಸಿ ಗದ್ದಿಗೌಡರ
04 ವಿಜಯಪುರ ರಮೇಶ ಜಿಗಜಿಣಗಿ
05 ಕಲಬುರಗಿ ಉಮೇಶ ಜಾದವ
06 ರಾಯಚೂರು ರಾಜಾ ಅಮರೇಶ್ವರ ನಾಯ್ಕ
07 ಬೀದರ ಭಗವಂತ ಖೂಬಾ
08 ಕೊಪ್ಪಳ ಕರಡಿ ಸಂಗಣ್ಣ
09 ಬಳ್ಳಾರಿ ವೈ ದೇವೇಂದ್ರಪ್ಪ
10 ಹಾವೇರಿ ಶಿವಕುಮಾರ ಉದಾಸಿ
11 ಧಾರವಾಡ ಪ್ರಹ್ಲಾದ ಜೋಶಿ
12 ಉತ್ತರ ಕನ್ನಡ ನಂತಕುಮಾರ ಹೆಗಡೆ
13 ದಾವಣಗೆರೆ ಜಿ.ಎಂ ಸಿದ್ದೇಶ್ವರ
14 ಶಿವಮೊಗ್ಗ ಬಿ.ವೈ ರಾಘವೇಂದ್ರ
15 ಉಡುಪಿ ಚಿಕ್ಕಮಗಳೂರು ಶೋಭಾ ಕರಂದ್ಲಾಜೆ
16 ದಕ್ಷಿಣ ಕನ್ನಡ ನಳೀನಕುಮಾರ ಕಟೀಲ
17 ಚಿತ್ರದುರ್ಗ ಎ.ನಾರಾಯಣಸ್ವಾಮಿ
18 ತುಮಕೂರು ಜಿ.ಎಸ್ ಬಸವರಾಜು
19 ಮೈಸೂರು ಪ್ರತಾಪ ಸಿಂಹ
20 ಚಾಮರಾಜನಗರ ಶ್ರೀನಿವಾಸ ಪ್ರಸಾದ
21 ಬೆಂಗಳೂರು ಉತ್ತರ ಡಿ.ವಿ ಸದಾನಂದಗೌಡ
22 ಬೆಂಗಳೂರು ಕೇಂದ್ರ ಪಿ.ಸಿ ಮೋಹನ
23 ಬೆಂಗಳೂರು ದಕ್ಷಿಣ ತೇಜಸ್ವಿಸೂರ್ಯ
24 ಚಿಕ್ಕಬಳ್ಳಾಪುರ ಬಿ.ಎನ್ ಬಚ್ಚೇಗೌಡ
25 ಕೋಲಾರ ಎಸ್.ಮುನಿಸ್ವಾಮಿ




Leave a Reply

Your email address will not be published. Required fields are marked *

error: Content is protected !!