8 ವರ್ಷದ ಮಗುವಿಗೆ ವಿಷವುಣಿಸಿ ತಾವು ಪ್ರಾಣಬಿಟ್ಟ ದಂಪತಿ

277

ಪ್ರಜಾಸ್ತ್ರ ಸುದ್ದಿ

ಮಂಗಳೂರು: ಮಗಳಿಗೆ ವಿಷವುಣಿಸಿ ಹೆತ್ತವರು ಸಹ ಸಾವನ್ನಪ್ಪಿರುವ ಘಟನೆ ಮೂಲ್ಕಿಯ ಪಡುಪಣಂಬೂರು ಕಲ್ಲಾಪುದಲ್ಲಿ ನಡೆದಿದೆ. ವಿನೋದ ಸಲ್ಯಾನ್(40), ಪತ್ನಿ ರಚನಾ(38) ಹಾಗೂ ಮಗಳು ಸಾಧ್ಯ(8) ಎಂದು ಗುರುತಿಸಲಾಗಿದೆ.

ಮೂವರು ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿರುವುದು ಸೋಮವಾರ ಬೆಳಕಿಗೆ ಬಂದಿದೆ. ಕಳೆದ ಎರಡು ದಿನಗಳಿಂದ ಮನೆಯಿಂದ ಯಾರು ಆಚೆ ಬರದೆ ಇರುವ ಕಾರಣಕ್ಕೆ ನೆರೆಹೊರೆಯವರು ಕಿಟಕಿ ತೆರೆದು ನೋಡಿದಾಗ ದುರಂತ ಸಾವು ಕಂಡು ಬಂದಿದೆ.

ವಿನೋದ ಮುಂಬೈನಲ್ಲಿ ಕಂಪನಿಯೊಂದರಲ್ಲಿ ಕೆಲಸ ಮಾಡ್ತಿದ್ದ. ಒಂದು ವರ್ಷಗಳ ಹಿಂದೆ ಊರಿಗೆ ಬಂದು ಬಾಡಿಗೆ ಮನೆಯಲ್ಲಿ ವಾಸವಾಗಿದ್ದು, ರಿಯಲ್ ಎಸ್ಟೇಟ್ ಉದ್ಯಮ ನಡೆಸ್ತಿದ್ದನಂತೆ. ಆರ್ಥಿಕ ಸಮಸ್ಯೆಯಿಂದ ಆತ್ಮಹತ್ಯೆ ಮಾಡಿಕೊಂಡರಬಹುದು ಎನ್ನಲಾಗ್ತಿದೆ. ಮೃತದೇಹದ ಬಳಿ ವಿಷದ ಬಾಟಲ್ ಪತ್ತೆಯಾಗಿದೆ. ಮೂಲ್ಕಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.




Leave a Reply

Your email address will not be published. Required fields are marked *

error: Content is protected !!