ಪ್ರಜಾಸ್ತ್ರ ಸಿನಿಮಾ ಡೆಸ್ಕ್
ಚಾಲೆಂಜಿಂಗ್ ಸ್ಟಾರ್ ದರ್ಶನ್ ಹಾಗೂ ಡಿಂಪಲ್ ಕ್ವೀನ್ ರಚಿತಾ ರಾಮ್ ಜೋಡಿಯ ಬಹುನಿರೀಕ್ಷಿತ ಕ್ರಾಂತಿ ಚಿತ್ರದ ಬಿಡುಗಡೆ ದಿನಾಂಕ ಘೋಷಣೆ ಮಾಡಲಾಗಿದೆ. ಈ ಮೂಲಕ ಇಷ್ಟು ದಿನಗಳಿಂದ ಅಭಿಮಾನಿಗಳು ಎದುರು ನೋಡುತ್ತಿದ್ದ ಸಮಯ ಬಂದಿದೆ.
ನಿರ್ದೇಶಕ ವಿ.ಹರಿಕೃಷ್ಣ ಈ ಬಗ್ಗೆ ಟ್ವೀಟ್ ಮಾಡಿದ್ದು, ಜನವರಿ 26, 2023ರಂದು ಕ್ರಾಂತಿ ಸಿನಿಮಾ ರಿಲೀಸ್ ಆಗಲಿದೆ ಎಂದು ತಿಳಿಸಿದ್ದಾರೆ. ಕನ್ನಡ ಜೊತೆಗೆ ತೆಲುಗು, ತಮಿಳು, ಮಲಿಯಾಳಿ ಹಾಗೂ ಹಿಂದಿಯಲ್ಲಿ ರಿಲೀಸ್ ಆಗುತ್ತಿದೆ. ಈ ಹಿಂದೆ ದರ್ಶನ್ ಜೊತೆ ಯಜಮಾನ ಸಿನಿಮಾ ನಿರ್ದೇಶನ ಮಾಡಿ ವಿ.ಹರಿಕೃಷ್ಣ ಸಕ್ಸಸ್ ಆಗಿದ್ದಾರೆ.
ದರ್ಶನ್ ಹಾಗೂ ರಚಿತಾ ರಾಮ್ ಜೋಡಿ ಈಗಾಗ್ಲೇ ಸಕ್ಸಸ್ ಸಿನಿಮಾ ನೋಡಿದೆ. ಇವರಿಬ್ಬರ ಕಾಂಬಿನೇಷನ್ ಅಭಿಮಾನಿಗಳಿಗೆ ಕಿಕ್ ನೀಡುತ್ತೆ. ಕ್ರಾಂತಿ ಸಿನಿಮಾ ಮತ್ತಷ್ಟು ಕಿಕ್ ನೀಡುವುದು ಪಕ್ಕಾ. ಶೈಲಜಾ ನಾಗ್ ಹಾಗೂ ಬಿ.ಸುರೇಶ್ ಚಿತ್ರಕ್ಕೆ ಬಂಡವಾಳ ಹೂಡಿದ್ದಾರೆ.