ದಿಯಾ ಖ್ಯಾತಿಯ ನಟ ಪೃಥ್ವಿ ಅಂಬಾರ್ ತಾಯಿ ನಿಧನ

459

ಪ್ರಜಾಸ್ತ್ರ ಸಿನಿಮಾ ಡೆಸ್ಕ್

ದಿಯಾ ಚಿತ್ರ ಖ್ಯಾತಿಯ ನಟ ಪೃಥ್ವಿ ಅಂಬಾರ್ ಅವರ ತಾಯಿ ಸುಜಾತಾ ವೀರಪ್ಪ ಅಂಬಾರ್ ಶುಕ್ರವಾರ ರಾತ್ರಿ ನಿಧನರಾಗಿದ್ದಾರೆ. ಇಂದು ಕಾಸರಗೋಡಿನ ಉಪ್ಪಳ ಹತ್ತಿರದ ಐಲದಲ್ಲಿ ಅಂತ್ಯಕ್ರಿಯೆ ನಡೆಯಲಿದೆ. ಅನಾರೋಗ್ಯದಿಂದ ಬಳಲುತ್ತಿದ್ದ ಸುಜಾತಾ ಶುಕ್ರವಾರ ರಾತ್ರಿ ನಿಧನರಾಗಿದ್ದಾರೆ.

ದಿಯಾ ಚಿತ್ರದಿಂದ ಖ್ಯಾತಿ ಪಡೆದ ಪೃಥ್ವಿ ಅಂಬಾರ್, ಇತ್ತೀಚೆಗೆ ಶಿವಣ್ಣ, ಡಾಲಿ ನಟನೆಯ ಭೈರಾಗಿ ಚಿತ್ರದಲ್ಲಿಯೂ ನಟಿಸಿದ್ದಾರೆ. ಶುಗರ್ ಲೆಸ್ ಚಿತ್ರ ಸಹ ಬಿಡುಗಡೆಯಾಗಿದೆ. ಚಿತ್ರರಂಗದಲ್ಲಿ ನೆಲೆಯೂರುತ್ತಿರುವ ಹೊತ್ತಿನಲ್ಲಿ ತಾಯಿಯನ್ನು ಕಳೆದುಕೊಂಡಿರುವ ನಟನ ಕುಟುಂಬದಲ್ಲಿ ನೋವು ಮಡುಗಟ್ಟಿದೆ.




Leave a Reply

Your email address will not be published. Required fields are marked *

error: Content is protected !!