2ನೇ ಮದುವೆ ಬಗ್ಗೆ ನಟಿ ಪ್ರೇಮಾ ಹೇಳಿದ್ದೇನು?

242

ಪ್ರಜಾಸ್ತ್ರ ಸಿನಿಮಾ ಡೆಸ್ಕ್

ಒಂದು ಕಾಲದ ಟಾಪ್ ನಟಿಯರ ಸಾಲಿನಲ್ಲಿದ್ದ ನಟಿ ಪ್ರೇಮಾ ಸಿನಿರಂಗದಿಂದ ದೂರವೇ ಉಳಿದಿದ್ದಾರೆ. 2017ರಲ್ಲಿ ಉಪೇಂದ್ರ ಮತ್ತೆ ಬಾ ಚಿತ್ರದಲ್ಲಿ ಕಾಣಿಸಿಕೊಂಡ ಬಳಿಕ ಯಾವುದೇ ಚಿತ್ರದಲ್ಲಿ ನಟಿಸಲಿಲ್ಲ. ಆದರೆ ಕಳೆದೊಂದು ವಾರದಿಂದ ಪ್ರೇಮಾ ಚರ್ಚೆಯಲ್ಲಿದ್ದು ಅದು 2ನೇ ಮದುವೆ ವಿಚಾರವಾಗಿದೆ.

ತುಳುಭಾಗದ ದೈವವಾದ ಕೊರಗಜ್ಜನ ಮೊರೆ ಹೋಗಿದ್ದಾರೆ. 2ನೇ ಮದುವೆಗೆ ಸಿದ್ಧತೆ ನಡೆಸಿದ್ದಾರೆ ಅನ್ನೋ ಸುದ್ದಿ ವೈರಲ್ ಆಗಿದೆ. ಈ ಬಗ್ಗೆ ನಟಿ ಪ್ರೇಮಾ ಆಗಲಿ, ಅವರ ಕುಟುಂಬಸ್ಥರಾಗಲಿ ಯಾವುದೇ ಹೇಳಿಕೆ ನೀಡಿರಲಿಲ್ಲ. ಮಾಧ್ಯಮ ಅಕಾಡೆಮಿಯ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ನಟಿ ಪ್ರೇಮಾ, ಈ ವಿಚಾರವಾಗಿ ತುಂಬಾ ಖಾರವಾಗಿ ಮಾತನಾಡಿದ್ದಾರೆ.

ನಾನು ಓಡಿ ಹೋಗಿ ಮದುವೆ ಆಗೋದಿಲ್ಲ. ಅಂತಹ ತಪ್ಪನ್ನು ನಾನು ಮಾಡಿಲ್ಲ. ನಾನು ಮದುವೆ ಆದರೆ ಹೇಳಿಬಿಟ್ಟೆ ಆಗುತ್ತೇನೆ ಅಂತಾ ಗರಂ ಆಗಿ ಮಾತನಾಡಿದ್ದಾರೆ. ಈ ಮೂಲಕ 2ನೇ ಮದುವೆ ವಿಚಾರವಾಗಿ ಎದ್ದಿರುವ ಸುದ್ದಿಗೆ ಪ್ರತಿಕ್ರಿಯೆ ನೀಡಿದ್ದಾರೆ.

2006ರಲ್ಲಿ ಕೊಡಗಿನ ಮೂಲದ ಜೀವನ್ ಅಪ್ಪಚ್ಚು ಎಂಬುವರ ಜೊತೆ ಮದುವೆಯಾದರು. 10 ವರ್ಷಗಳ ಸಂಸಾರ ಚೆನ್ನಾಗಿ ನಡೆಯಿತು. ಅದೇನಾಯಿತೋ ಗೊತ್ತಿಲ್ಲ 2016ರಲ್ಲಿ ದಂಪತಿ ದೂರವಾದರು. ಅಂದಿನಿಂದ ಏಕಾಂಗಿಯಾಗಿದ್ದಾರೆ. 44 ವರ್ಷದ ಪ್ರೇಮಾ ಈಗ 2ನೇ ಮದುವೆಯಾಗುತ್ತಿದ್ದಾರೆ ಅನ್ನೋದು ವಿಚಾರ ಮಾತ್ರ ತೀವ್ರ ಚರ್ಚೆಯಲ್ಲಿದೆ.




Leave a Reply

Your email address will not be published. Required fields are marked *

error: Content is protected !!