ಅಂಬಟ್ಟಿ ರಾಯ್ಡು ನಿವೃತ್ತಿ

302

ಪ್ರಜಾಸ್ತ್ರ ಕ್ರೀಡಾ ಸುದ್ದಿ

ಚೆನ್ನೈ ಸೂಪರ್ ತಂಡದ ಸ್ಫೋಟಕ ಬ್ಯಾಟ್ಸಮನ್ ಅಂಬಟ್ಟಿ ರಾಯ್ಡು ಐಪಿಎಲ್ ಕ್ರಿಕೆಟ್ ಆಟಕ್ಕೆ ನಿವೃತ್ತಿ ಘೋಷಿಸಿದ್ದಾರೆ. ಹಣದ ಹೊಳೆ ಹರಿಸುವ ಚುಟುಕು ಪಂದ್ಯಗಳ ಟೂರ್ನಿಯಿಂದ ಹೊರ ನಡೆಯುವುದಾಗಿ ಟ್ವೀಟ್ ಮೂಲಕ ತಿಳಿಸಿದ್ದಾರೆ.

ಕಳೆದ 13 ವರ್ಷಗಳಲ್ಲಿ ಮುಂಬೈ ಇಂಡಿಯನ್ಸ್ ಹಾಗೂ ಸಿಎಸ್ಕೆ ತಂಡದೊಂದಿಗೆ ತುಂಬಾ ಸುಂದರ ಪಯಣವಾಗಿದೆ. ಖುಷಿಯಿಂದ ಹೇಳುತ್ತಿದ್ದೇನೆ. ಇದು ನನ್ನ ಕೊನೆಯ ಐಪಿಎಲ್ ಎಂದು ಟ್ವೀಟ್ ಮಾಡಿದ್ದಾರೆ. ಆದರೆ, ನಂತರ ಅದನ್ನು ಡಿಲೀಟ್ ಮಾಡಿದ್ದಾರೆ.

2010ರಿಂದ 2017ರ ತನಕ ಮುಂಬೈ ಇಂಡಿಯನ್ಸ್ ಪರ ಆಡಿದ್ದಾರೆ. 2018ರಿಂದ ಸಿಎಸ್ಕೆ ಪರ ಆಡುತ್ತಿದ್ದಾರೆ. 187 ಪಂದ್ಯಗಳಲ್ಲಿ 4,187 ರನ್ ಬಾರಿಸಿದ್ದಾರೆ. 100 ರನ್ ಗರಿಷ್ಠ ಸ್ಕೋರ್ ಆಗಿದೆ. ನಿವೃತ್ತಿಯ ಬಗ್ಗೆ ಟ್ವೀಟ್ ಮಾಡಿ ಡಿಲೀಟ್ ಯಾಕೆ ಮಾಡಿದರು ಅನ್ನೋ ಪ್ರಶ್ನೆ ಮೂಡಿದೆ.




Leave a Reply

Your email address will not be published. Required fields are marked *

error: Content is protected !!