ಹ್ಯಾಟ್ರಿಕ್ ಹೀರೋ, ಪವರ್ ಸ್ಟಾರ್ ಆಪ್ತ ಸೂಸೈಡ್

396

ಹ್ಯಾಟ್ರಿಕ್ ಹೀರೋ ಶಿವರಾಜಕುಮಾರ ಹಾಗೂ ಪವರ್ ಸ್ಟಾರ್ ಪುನೀತರಾಜಕುಮಾರ ಅವರ ಆಪ್ತ ಕಪಾಲಿ ಮೋಹನ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ನಗರದ ತಮ್ಮದೆ ಹೋಟೆಲ್ ನಲ್ಲಿ ನೇಣು ಬೀಗಿದುಕೊಂಡ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ.

ಡಾ.ರಾಜಕುಮಾರ ಅವರ ಕುಟುಂಬದೊಂದಿಗೆ ವ್ಯವಹಾರಿಕ ಪಾಲುದಾರಿಕೆ ಹೊಂದಿದ್ದ ಕಪಾಲಿ ಮೋಹನ, ನಟ ಶಿವರಾಜಕುಮಾರ ಹಾಗೂ ಪುನೀತರಾಜಕುಮಾರ ಅವರಿಗೆ ಬಹಳ ಆಪ್ತರಾಗಿದ್ರು. ನಗರದಲ್ಲಿರುವ ತಮ್ಮದೆ ಸುಪ್ರಿಮೋ ಹೋಟೆಲ್ ನಲ್ಲಿ ನೇಣಿಗೆ ಶರಣಾಗಿದ್ದು, ನಿನ್ನೆ ರಾತ್ರಿಯೇ ಆತ್ಮಹತ್ಯೆ ಮಾಡಿಕೊಂಡಿರಬಹುದು ಎನ್ನಲಾಗ್ತಿದೆ.

ಹೋಟೆಲ್ ಉದ್ಯಮದ ಜೊತೆಗೆ ಸಿನ್ಮಾ ನಿರ್ಮಾಣ, ವಿತರಣೆಯಲ್ಲಿಯೂ ತೊಡಗಿಸಿಕೊಂಡಿದ್ರು. ಇವರ ಆರ್.ಜಿ ಹೋಟೆಲ್ ಮೇಲೆ ಈ ಹಿಂದೆ ಐಟಿ ರೇಡ್ ಆಗಿತ್ತು. ಉಡುಪಿ ಜಿಲ್ಲೆ ಕುಂದಾಪುರ ತಾಲೂಕಿನ ವಕ್ವಾಡಿಯವಾಗಿರುವ ಕಪಾಲಿ ಮೋಹನ ಇತ್ತೀಚೆಗೆ ಆರ್ಥಿಕ ಸಂಕಷ್ಟ ಎದುರಿಸ್ತಿದ್ರು. ಅಲ್ದೇ, ಈ ಹಿಂದೆಯೂ ಸಹ ಆತ್ಮಹತ್ಯೆಗೆ ಯತ್ನಿಸಿದ್ರು.




Leave a Reply

Your email address will not be published. Required fields are marked *

error: Content is protected !!