ಉದ್ಯಮಿ, ನಿರ್ಮಾಪಕ ಸೌಂದರ್ಯ ಜಗದೀಶ್ ನಿಧನ

92

ಪ್ರಜಾಸ್ತ್ರ ಸಿನಿಮಾ ಡೆಸ್ಕ್

ಬೆಂಗಳೂರು: ಉದ್ಯಮಿ ಹಾಗೂ ಸಿನಿಮಾ ನಿರ್ಮಾಪಕ ಸೌಂದರ್ಯ ಜಗದೀಶ್, ನಗರದ ಮಹಾಲಕ್ಷ್ಮಿ ಲೇಔಟ್ ನಲ್ಲಿರುವ ನಿವಾಸದಲ್ಲಿ ಆತ್ಮಹತ್ಯೆಗೆ ಶರಣಾಗಿದ್ದಾರೆ. ರಾಜಾಜಿನಗರದಲ್ಲಿ ಜೆಟ್ ಲ್ಯಾಗ್ ಅನ್ನೋ ರೆಸ್ಟೋ ಬಾರ್ ನಡೆಸುತ್ತಿದ್ದರು. ಇತ್ತೀಚೆಗೆ ಕಾಟೇರ ಚಿತ್ರದ ಸಕ್ಸಸ್ ಪಾರ್ಟಿ ವಿಚಾರವಾಗಿ ಹೆಸರು ಮುನ್ನಲೆಗೆ ಬಂತು.

ಆರ್ಥಿಕ ಸಂಕಷ್ಟದಿಂದಾಗಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಹೇಳಲಾಗುತ್ತಿದೆ. ಕುಟುಂಬಸ್ಥರ ಹೇಳಿಕೆ ಪಡೆದು ಮುಂದಿನ ಕ್ರಮಗಳನ್ನು ತೆಗೆದುಕೊಳ್ಳಲಾಗುವುದು ಎಂದು ಪೊಲೀಸರು ಹೇಳಿದ್ದಾರೆ.

ರಾಮ್ ಲೀಲಾ, ಅಪ್ಪು ಮತ್ತು ಪಪ್ಪು, ಸ್ನೇಹಿತರು, ಮಸ್ತ್ ಮಜಾ ಮಾಡಿ ಅನ್ನೋ ಸಿನಿಮಾಗಳಿಗೆ ನಿರ್ಮಾಪಕರಾಗಿದ್ದರು. ಅವರು ಸಾವು ಅವರ ಕ್ಷೇತ್ರದ ಸಾಕಷ್ಟು ಜನರಿಗೆ ಶಾಕ್ ನೀಡಿದೆ.




Leave a Reply

Your email address will not be published. Required fields are marked *

error: Content is protected !!