ಬೆಣ್ಣೆನಗರಿಯಲ್ಲಿಂದು ಬರೋಬ್ಬರಿ 21 ಕರೋನಾ ಕೇಸ್: ಶಾಕಿಂಗ್ ಸಂಡೇ…

370

ದಾವಣಗೆರೆ: ಕಳೆದೊಂದು ವಾರದ ಹಿಂದೆ ಗ್ರೀನ್ ಝೋನ್ ನಲ್ಲಿದ್ದ ಬೆಣ್ಣೆನಗರಿ ಇದೀಗ ರೆಡ್ ಝೋನ್ ನತ್ತ ಮುಖ ಮಾಡ್ತಿದೆ. ಯಾಕಂದ್ರೆ, ಇವತ್ತು ಒಂದೇ ದಿನದಲ್ಲಿ ಬರೋಬ್ಬರಿ 21 ಕರೋನಾ ಸೋಂಕು ದೃಢಪಟ್ಟಿವೆ. ಇದ್ರಿಂದಾಗಿ ಜಿಲ್ಲೆಯ ಜನರು ಬೆಚ್ಚಿಬಿದ್ದಿದ್ದಾರೆ.

ಈ ಬಗ್ಗೆ ದಾವಣಗೆರೆ ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ ಅವರು ಮಾಹಿತಿ ನೀಡಿದ್ದು, ಬರೋಬ್ಬರಿ 21 ಕೇಸ್ ದಾಖಲಾಗಿವೆ ಎಂದು ತಿಳಿಸಿದ್ದಾರೆ. ಈ ಮೂಲಕ ಜಿಲ್ಲೆಯಲ್ಲಿ 31ಕ್ಕೆ ಏರಿಕೆಯಾಗಿದೆ.

ಮೊನ್ನೆ 94, ನಿನ್ನೆ 72 ಸೇರಿ 164 ಮಂದಿಯ ಸ್ಯಾಂಪಲ್ಸ್ ಕಳುಹಿಸಲಾಗಿತ್ತು. ಆದ್ರೆ, ಇದೀಗ 31ಕ್ಕೆ ಏರಿಕೆಯಾಗಿದೆ. ಇಂದು ಒಂದೇ ದಿನದಲ್ಲಿ 21 ಕೇಸ್ ದಾಖಲಾಗಿದೆ. ಈ ಬಗ್ಗೆ ಸ್ಥಳೀಯರು ಜಿಲ್ಲಾಡಳಿತ, ಶಾಸಕರು, ಉಸ್ತುವಾರಿ ಸಚಿವರ ವಿರುದ್ಧ ಆಕ್ರೋಶ ವ್ಯಕ್ತಪಡಿಸ್ತಿದ್ದಾರೆ.




Leave a Reply

Your email address will not be published. Required fields are marked *

error: Content is protected !!