ಪೇಸಿಎಂ, ಕ್ರೈಪಿಎಂ ಪೋಸ್ಟರ್ ಟ್ರೆಂಡಿಂಗ್

108

ಪ್ರಜಾಸ್ತ್ರ ಸುದ್ದಿ

ಬೆಂಗಳೂರು: ವಿಧಾನಸಭಾ ಚುನಾವಣೆ ಕಣದಲ್ಲಿ ವಾಗ್ವಾದಗಳು ಜೋರಾಗಿವೆ. ಕಾಂಗ್ರೆಸ್ ತಮ್ಮನ್ನು 91 ಬಾರಿ ನಿಂದನೆ ಮಾಡಿದೆ ಎಂದು ಪ್ರಧಾನಿ ಮೋದಿ ಹೇಳಿದ ಬಳಿಕವೂ ಕಾಂಗ್ರೆಸ್ ನಾಯಕರು ಟೀಕಿಸಿದ್ದಾರೆ. ಪ್ರಧಾನಿ ಮೋದಿ ದೇಶದ ಅಭಿವೃದ್ಧಿ ಬಗ್ಗೆ ತಲೆ ಕೆಡಿಸಿಕೊಂಡಿಲ್ಲ. 91 ಬಾರಿ ನಿಂದಿಸಿದೆ ಎಂದು ಹೇಳುತ್ತಿದ್ದಾರೆ. ಅವರು ಗಾಂಧಿ ಕುಟುಂಬವನ್ನು ಅದಕ್ಕಿಂತ ಹೆಚ್ಚು ಬಾರಿ ಹೀಯಾಳಿಸಿದ್ದಾರೆ ಎಂದು ಎಐಸಿಸಿ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ತಿರುಗೇಟು ನೀಡಿದ್ದಾರೆ.

ಪ್ರಿಯಾಂಕಾ ಗಾಂಧಿ ಹೇಳಿಕೆ ಬೆನ್ನಲ್ಲೆ ಪಿಸಿಎಂ ಪೋಸ್ಟರ್ ಅಭಿಯಾನದ ರೀತಿಯಲ್ಲಿ ಕ್ರೈಪಿಎಂ ಪೋಸ್ಟರ್ ಅಭಿಯಾನ ನಡೆಸಲಾಗಿದೆ. ಹ್ಯಾಶ್ ಟ್ಯಾಗ್ ಕ್ರೈಪಿಎಂಪೇಸಿಎಂ ಎಂದು ಟ್ವೀಟರ್ ನಲ್ಲಿ ಶೇರ್ ಮಾಡಲಾಗಿದ್ದು, ಈ ಕುರಿತು ಸಾಕಷ್ಟು ಮೀಮ್ಸ್ ಗಳು ಹರಿದಾಡುತ್ತಿವೆ.

ಶೇಕಡ 40ರಷ್ಟು ಕಮಿಷನ್ ವಿಚಾರಕ್ಕೆ ಸಂಬಂಧಿಸಿದಂತೆ ಪೇಸಿಎಂ ಪೋಸ್ಟರ್ ಅಭಿಯಾನ ದೊಡ್ಡ ಮಟ್ಟದಲ್ಲಿ ಸುದ್ದಿ ಮಾಡಿತು. ಇದರಿಂದ ಸರ್ಕಾರಕ್ಕೆ ಸಾಕಷ್ಟು ಮುಜುಗರ ತಂದಿತ್ತು. ಈಗ ಅದೆ ಮಾದರಿಯಲ್ಲಿ ಕ್ರೈಪಿಎಂ ಎಂದು ಪೋಸ್ಟರ್ ಹರಿಬಿಡುವ ಮೂಲಕ ಟ್ರೆಂಡಿಂಗ್ ಸೃಷ್ಟಿಸಿದೆ.




Leave a Reply

Your email address will not be published. Required fields are marked *

error: Content is protected !!