ನನ್ನ ಪ್ರೇಮಕಥೆಗಳು ನನ್ನೊಂದಿಗೆ ಸಮಾಧಿ

127

ಪ್ರಜಾಸ್ತ್ರ ಸಿನಿಮಾ ಡೆಸ್ಕ್

ಬಾಲಿವುಡ್ ಅಂಗಳದ ಬ್ಯಾಚುಲರ್ ನಟ ಸಲ್ಮಾನ್ ಖಾನ್, ಪ್ರೀತಿ, ಪ್ರೇಮ, ಜೀವನ, ಮಕ್ಕಳು ಹಾಗೂ ಬೆದರಿಕೆಯ ಬದುಕಿನ ಬಗ್ಗೆ ಮಾತನಾಡಿದ್ದಾರೆ. ನನ್ನ ಮಾಜಿ ಗಳತಿಯರೆಲ್ಲ ಒಳ್ಳೆಯವರು. ತಪ್ಪು ನನ್ನದೆ. ಹೀಗಾಗಿ ನನ್ನೆಲ್ಲ ಪ್ರೇಮಕಥೆಗಳು ನನ್ನೊಂದಿಗೆ ಸಮಾಧಿಯಾಗುತ್ತವೆ ಎಂದಿದ್ದಾರೆ.

ಮೊದಲ ಗೆಳೆತಿಯಿಂದ ಬೇರೆಯಾದಾಗ ತಪ್ಪು ತನ್ನದೆಂದು ತಿಳಿದಿದ್ದಳು. ಸಾಲು ಸಾಲಾಗಿ ಇದೆ ರೀತಿಯಾದರೆ ಅದು ನನ್ನ ತಪ್ಪೆಂದು ಅರ್ಥವಾಗುತ್ತೆ. ಅವರು ಎಲ್ಲೆ ಇದ್ದರೂ ಸಂತೋಷದಿಂದ ಇರಬೇಕೆಂದು ಬಯಸುತ್ತೇನೆ.

ನನಗೆ ಮಕ್ಕಳೆಂದರೆ ಇಷ್ಟ. ನಾನು ತಂದೆಯಾಗಲು ಬಯಸುತ್ತೇನೆ. ಆದರೆ, ನಮ್ಮ ಕಾನೂನಿನಲ್ಲಿ ಮದುವೆ ಹೊರತಾಗಿ ತಂದೆಯನ್ನು ಸ್ವೀಕರಿಸುವುದಿಲ್ಲ. ಇನ್ನು ಬೆದರಿಕೆ ಕರೆಗಳ ಬಗ್ಗೆ ಮಾತನಾಡಿದ ಸಲ್ಲು, ಅಭದ್ರತೆಯಲ್ಲಿ ಬದುಕುವುದಕ್ಕಿಂತ ಸುರಕ್ಷಿತವಾಗಿ ಬದುಕುವುದು ಮುಖ್ಯ. ಹೀಗಾಗಿ ನನಗೆ ಭದ್ರತೆ ಹೆಚ್ಚಿಸಲಾಗಿದೆ. ಇದರಿಂದಾಗಿ ಮೊದಲಿನಂತೆ ಒಂಟಿಯಾಗಿ ಸಂಚರಿಸಲು ಆಗುತ್ತಿಲ್ಲ. ನನ್ನ ಸುತ್ತಲು ಬಂದೂಕುಗಳಿವೆ ಎನ್ನುವ ಮೂಲಕ ತುಂಬಾ ಭಾವನಾತ್ಮಕವಾಗಿ ಮಾತನಾಡಿದ್ದಾರೆ.




Leave a Reply

Your email address will not be published. Required fields are marked *

error: Content is protected !!