ಸಿಂದಗಿ: ಮೇ 2ರಿಂದ 5ರ ತನಕ ಅಂಚೆ ಮತದಾನ

118

ಪ್ರಜಾಸ್ತ್ರ ಸುದ್ದಿ

ಸಿಂದಗಿ: ಕರ್ನಾಟಕ ವಿಧಾನಸಭಾ ಚುನಾವಣೆ ಸಂಬಂಧ ಈಗಾಗ್ಲೇ ಮನೆ ಮತ ಶುರುವಾಗಿದೆ. ಈಗ ಮೇ 2ರಿಂದ 5ರ ತನಕ ಅಂಚೆ ಮತದಾನ ನಡೆಯಲಿದೆ ಎಂದು ಚುನಾವಣಾ ಅಧಿಕಾರಿಗಳು ತಿಳಿಸಿದ್ದಾರೆ.

ತಹಶೀಲ್ದಾರ್ ಕಚೇರಿಯಲ್ಲಿನ ಸಾಮಾಜಿಕ ಭದ್ರತಾ ಕೊಠಡಿಯಲ್ಲಿ ಅಂಚೆ ಮತದಾನಕ್ಕೆ ವ್ಯವಸ್ಥೆ ಮಾಡಲಾಗಿದೆ. ಮುಂಜಾನೆ 8 ಗಂಟೆಯಿಂದ ಸಂಜೆ 6 ಗಂಟೆಯ ತನಕ ಮತದಾನ ಮಾಡಬಹುದು. ಇನ್ನು ಮತದಾನ ಕಾರ್ಯದಲ್ಲಿ ನೇಮಿಸಿರುವ ಅಧಿಕಾರಿಗಳು, ಸಿಬ್ಬಂದಿಗೆ ಆರ್.ಡಿ ಪಾಟೀಲ ಕಾಲೇಜಿನಲ್ಲಿ ಮತದಾನಕ್ಕೆ ಅವಕಾಶ ಕಲ್ಪಿಸಲಾಗಿದೆ. ಮುಂಜಾನೆ 10ರಿಂದ ಸಂಜೆ 5ಗಂಟೆಯ ತನಕ ಮತದಾನ ಮಾಡಬಹುದು ಎಂದು ತಿಳಿಸಲಾಗಿದೆ.




Leave a Reply

Your email address will not be published. Required fields are marked *

error: Content is protected !!