110 ಕ್ಷೇತ್ರಗಳಲ್ಲಿ ಉತ್ತಮ ಪ್ರಜಾಕೀಯ ಸ್ಪರ್ಧೆ: ಉಪೇಂದ್ರ

114

ಪ್ರಜಾಸ್ತ್ರ ಸುದ್ದಿ

ಬೆಂಗಳೂರು: ಕರ್ನಾಟಕ ವಿಧಾನಸಭಾ ಚುನಾವಣೆಯ ಮತದಾನಕ್ಕೆ ಇನ್ನು ಕೇವಲ 9 ದಿನಗಳು ಬಾಕಿ ಉಳಿದಿವೆ. ಹೀಗಿರುವ ಹೊತ್ತಿನಲ್ಲಿ ಪ್ರಜಾಕೀಯ ಪಕ್ಷದ ಸ್ಥಂಸ್ಥಾಪಕ, ನಟ ಉಪೇಂದ್ರ ಇಂದು ಮಾಧ್ಯಮಗೋಷ್ಠಿ ಕರೆದು ಪ್ರಚಾರ ಮಾಡಿದ್ದಾರೆ.

ನಾವೆಲ್ಲ ಕೆಲಸ ಮಾಡುತ್ತೇವೆ. ನಾವು ನಾಯಕರಲ್ಲ ಎಂದು ಹೇಳುವ ಉದ್ದೇಶದಿಂದಲೇ ಕಾರ್ಮಿಕರ ದಿನಾಚರಣೆಯಂದು ನಿಮ್ಮ ಮುಂದೆ ಬಂದಿದ್ದೇವೆ. ನಮ್ಮ ಪಕ್ಷದ ವೆಬ್ ಸೈಟ್ ಇದೆ. ಮೊಬೈಲ್ ಆಪ್ ಇದೆ. ಆಯಾ ಕ್ಷೇತ್ರದ ಮತದಾರರೆ ಅವರನ್ನು ಆಯ್ಕೆ ಮಾಡಿ ನಮಗೆ ಕಳಿಸಿದ್ದಾರೆ. ಅದರಲ್ಲಿ ಪರಿಶೀಲನೆ ಮಾಡಿ ನಾವು ಬಿ-ಫಾರಂ ಕೊಟ್ಟಿದ್ದೀವಿ ಅಂತಾ ಹೇಳಿದರು.

110 ಕ್ಷೇತ್ರಗಳಲ್ಲಿ ನಮ್ಮ ಅಭ್ಯರ್ಥಿಗಳು ಸ್ಪರ್ಧಿಸುತ್ತಿದ್ದು, ಅವರವರ ಕ್ಷೇತ್ರದ ಜನರೊಂದಿಗೆ ನಿರಂತರ ಸಂಪರ್ಕದಲ್ಲಿರಬೇಕು. ಅವರ ಬೇಡಿಕೆಗಳು ಏನಿವೆ. ಅದರಲ್ಲಿ ತುಂಬಾ ಪ್ರಮುಖ್ಯತೆ ಯಾವುದು ಇವೆ ಅನ್ನೋದರ ಪಟ್ಟಿ ಮಾಡಿಕೊಳ್ಳಬೇಕು. ಪ್ರತಿ 6 ತಿಂಗಳಿಗೊಮ್ಮೆ ಉತ್ತಮ ಪ್ರಜಾಕೀಯ ಪಕ್ಷ ಪೋಲಿಂಗ್ ಮಾಡುತ್ತೆ. ಆ ರಿಪೋರ್ಟ್ ಮೇಲೆ ಅವರು ಮುಂದುವರೆಯುವುದಾ, ತಿದ್ದುಕೊಳ್ಳುತ್ತಾರಾ, ರಾಜೀನಾಮೆ ಕೊಡಬೇಕಾ ಅನ್ನೋದು ನಿರ್ಧಾರವಾಗುತ್ತೆ.

ಸೆಲೆಕ್ಷನ್, ಎಲೆಕ್ಷನ್, ಕರೆಕ್ಷನ್, ರಿಜಕ್ಷನ್, ಪ್ರಮೋಷನ್ ಅನ್ನೋದರ ಮೇಲೆ ಕೆಲಸ ನಡೆಯುತ್ತೆ. 110 ಕ್ಷೇತ್ರಗಳಲ್ಲಿ ಸ್ಪರ್ಧಿಸಿದ್ದಾರೆ. ನಾವು ಸ್ಪರ್ಧಿಸಿ ಎಂದು ಹೇಳಿಲ್ಲ. ಜನರೆ ಇವರನ್ನು ಆಯ್ಕೆ ಮಾಡಿ ಕಳಿಸಿದ್ದಾರೆ. ಉಳಿದ 114 ಕ್ಷೇತ್ರಗಳಲ್ಲಿ ಆಸಕ್ತಿ ತೋರಿಸಿಲ್ಲ. ನಾವು ಬಲವಂತ ಮಾಡಿಲ್ಲ. ಇಲ್ಲಿ ಆಪ್ ಮೂಲಕವೇ ಪ್ರಚಾರ ಮಾಡುತ್ತಾರೆ. ಯಾವುದೇ ಮೆರವಣಿಗೆ, ಸಭೆ, ಸಮಾರಂಭ, ರೋಡ್ ಶೋ ಇರುವುದಿಲ್ಲ. ನಗದು ರಹಿತ ಪಕ್ಷ. ಕಾರ್ಯಕರ್ತರು ಇಲ್ಲ. ಪ್ರಾದೇಶಿಕ ಕಚೇರಿಗಳು ಇಲ್ಲ. 40ಕ್ಕೂ ಹೆಚ್ಚು ಕ್ಷೇತ್ರಗಳಲ್ಲಿ ಅಭ್ಯರ್ಥಿಗಳು ಗೆಲ್ಲುವು ವಿಶ್ವಾಸವಿದೆ ಎಂದರು.




Leave a Reply

Your email address will not be published. Required fields are marked *

error: Content is protected !!