‘ಡೇರ್ ಡೆವಿಲ್ ಮುಸ್ತಾಫಾ’ ಸೌಂಡ್ ಜೋರು

125

ಪ್ರಜಾಸ್ತ್ರ ಸಿನಿಮಾ ಡೆಸ್ಕ್

ಕನ್ನಡ ಸಾಹಿತ್ಯ ಜಗತ್ತಿನಲ್ಲಿ ತಮ್ಮದೆಯಾದ ಹೊಸ ಅಲೆ ಸೃಷ್ಟಿಸಿದವರು ಎಂದರೆ ಕೆ.ಪಿ ಪೂರ್ಣಚಂದ್ರ ತೇಜಸ್ವಿ. ಅವರ ಬರಹವನ್ನು ಎಷ್ಟು ಇಷ್ಟಪಡುವವರು ಇದ್ದಾರೋ ಅವರ ಬದುಕಿನ ಶೈಲಿಯನ್ನು ಮೆಚ್ಚಿಕೊಂಡು ಅವರಂತೆ ಇರುವವರಿದ್ದಾರೆ. ಲೇಖಕ ಕಣ್ಮರೆಯಾದರೂ ಆತನ ಸಾಹಿತ್ಯ ಎಂದಿಗೂ ಜೀವಂತ. ಆದರೆ, ತೇಜಸ್ವಿ ಅವರ ವಿಚಾರದಲ್ಲಿ ಇದಕ್ಕಿಂತ ವಿಭಿನ್ನವಾದ ಪ್ರಯೋಗ ನಡೆದಿದೆ.

ಹೌದು, ಪೂರ್ಣಚಂದ್ರ ತೇಜಸ್ವಿ ಅವರ ಓದುಗರೆ ಸೇರಿಕೊಂಡು ಸಿನಿಮಾವೊಂದು ನಿರ್ಮಿಸಿದ್ದಾರೆ. ಅದುವೇ ಡೇರ್ ಡೆವಿಲ್ ಮುಸ್ತಾಫಾ. 100ಕ್ಕೂ ಅಧಿಕ ಓದುಗರು ಇದಕ್ಕೆ ಬಂಡಾವಳ ಹೂಡಿ ಸಿನಿಮಾ ನಿರ್ಮಿಸಿದ್ದಾರೆ. ತೇಜಸ್ವಿ ಅವರ ಕಥೆಗಳನ್ನು ಇಟ್ಟುಕೊಂಡು ಸಿನಿಮಾ ಮಾಡಿದ್ದು, ಇದಕ್ಕೆ ಶಶಾಂಕ್ ಸೊಘಲ್ ಆಕ್ಷನ್ ಕಟ್ ಹೇಳಿದ್ದಾರೆ. ಈ ಚಿತ್ರದ ಟ್ರೇಲರ್ ರಿಲೀಸ್ ಆಗಿದ್ದು ಸಾಕಷ್ಟು ಕುತೂಹಲ ಮೂಡಿಸಿದೆ.

ನವನೀತ್ ಶ್ಯಾಮ್ ಮ್ಯೂಸಿಕ್ ಇದೆ. ರಾಹುಲ್ ರಾಯ್ ಸಿನಿಮಾಟೋಗ್ರಫಿ ಇದೆ. ಡಾಲಿ ಪಿಚ್ಚರ್ಸ್ ಅಡಿಯಲ್ಲಿ ಸಿನಿಮಾ ನಿರ್ಮಾಣವಾಗುತ್ತಿದೆ. ಪಿಆರ್ ಕೆ ಆಡಿಯೋ ಯುಟ್ಯೂಬ್ ಚಾನೆಲ್ ನಲ್ಲಿ ಟ್ರೇಲರ್ ರಿಲೀಸ್ ಆಗಿದೆ. ಮೇ 19ಕ್ಕೆ ಥಿಯೇಟರ್ ಗೆ ಬರುತ್ತಿದ್ದು, ತೇಜಸ್ವಿ ಅಭಿಮಾನಿಗಳು ಸಿನಿಮಾ ನೋಡಲು ಸಜ್ಜಾಗಿದ್ದಾರೆ.




Leave a Reply

Your email address will not be published. Required fields are marked *

error: Content is protected !!