Search

ನೀಟ್ ಪರೀಕ್ಷೆ: ಪ್ರಧಾನಿ ರೋಡ್ ಶೋ ಮಾರ್ಗ ಬದಲಾವಣೆ

111

ಪ್ರಜಾಸ್ತ್ರ ಸುದ್ದಿ

ಬೆಂಗಳೂರು: ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ಪ್ರಧಾನಿ ಮೋದಿ ಸಿಲಿಕಾನ್ ಸಿಟಿಯಲ್ಲಿ 2 ದಿನ ರೋಡ್ ಶೋ ನಡೆಸಲು ಸಮಯ ನಿಗದಿಯಾಗಿತ್ತು. ಆದರೆ, ಭಾನುವಾರ ನೀಟ್ ಪರೀಕ್ಷೆ ಇರುವುದರಿಂದ ಮಾರ್ಗ ಹಾಗೂ ಸಮಯ ಬದಲಾವಣೆ ಮಾಡಲಾಗಿದೆ.

ಮೇ 7ರಂದು ನಡೆಯುವ ನೀಟ್ ಪರೀಕ್ಷೆಯಲ್ಲಿ ಸುಮಾರು 1 ಲಕ್ಷಕ್ಕೂ ಹೆಚ್ಚು ವಿದ್ಯಾರ್ಥಿಗಳು ಬೆಂಗಳೂರಿನಲ್ಲಿ ಪರೀಕ್ಷೆ ಬರೆಯಲಿದ್ದಾರೆ. ಅಂದು ಪ್ರಧಾನಿ ಮೋದಿಯವರ 26.5 ಕಿಲೋ ಮೀಟರ್ ರೋಡ್ ಶೋ ನಡೆಯಬೇಕಿತ್ತು. ಇದರಿಂದ ವಿದ್ಯಾರ್ಥಿಗಳಿಗೆ ತೀವ್ರ ತೊಂದರೆಯಾಗಲಿದೆ ಅನ್ನೋದು ತಿಳಿದು ಬಂದು, ಇದನ್ನು ಶನಿವಾರವೇ ನಡೆಸಲಿದ್ದಾರೆ.

ಶನಿವಾರ ನಡೆಸಬೇಕಿದ್ದ 10 ಕಿಲೋ ಮೀಟರ್ ರೋಡ್ ಶೋ ಭಾನುವಾರ ನಡೆಯಲಿದೆ. ಸಮಯ, ಮಾರ್ಗವನ್ನು ಬದಲಾವಣೆ ಮಾಡಲಾಗಿದೆ. ಆದರೂ ಇದರ ಎಫೆಕ್ಟ್ ಹಲವು ವಿದ್ಯಾರ್ಥಿಗಳ ಮೇಲೆ ಆಗಲಿದೆ.

ಶನಿವಾರ ರೋಡ್ ಶೋ:

  • ಬೆಂಗಳೂರು ದಕ್ಷಿಣ ವಿಧಾನ ಸಭಾ ಕ್ಷೇತ್ರ
  • ಬೊಮ್ಮನಹಳ್ಳಿ ವಿಧಾನ ಸಭಾ ಕ್ಷೇತ್ರ
  • ಜಯನಗರ ವಿಧಾನ ಸಭಾ ಕ್ಷೇತ್ರ
  • ಪದ್ಮನಾಭ ನಗರ ವಿಧಾನ ಸಭಾ ಕ್ಷೇತ್ರ
  • ಬಸವಣಗುಡಿ ವಿಧಾನ ಸಭಾ ಕ್ಷೇತ್ರ
  • ಚಿಕ್ಕಪೇಟೆ ವಿಧಾನ ಸಭಾ ಕ್ಷೇತ್ರ
  • ಚಾಮರಾಜ ಪೇಟೆ ವಿಧಾನ ಸಭಾ
  • ಗಾಂಧಿ ನಗರ ವಿಧಾನ ಸಭಾ ಕ್ಷೇತ್ರ
  • ಮಹಾಲಕ್ಷ್ಮಿ ಲೇಔಟ್ ವಿಧಾನ ಸಭಾ ಕ್ಷೇತ್ರ
  • ವಿಜಯ ನಗರ ವಿಧಾನ ಸಭಾ ಕ್ಷೇತ್ರ
  • ಗೋವಿಂದ ರಾಜ ನಗರ ವಿಧಾನ ಸಭಾ ಕ್ಷೇತ್ರ
  • ರಾಜಾಜಿ ನಗರ ವಿಧಾನ ಸಭಾ ಕ್ಷೇತ್ರ
  • ಮಲ್ಲೇಶ್ವರಂ ವಿಧಾನ ಸಭಾ ಕ್ಷೇತ್ರ

ಭಾನುವಾರದ ರೋಡ್ ಶೋ:

  • ಮಹಾದೇವ ಪುರ ವಿಧಾನ ಸಭಾ ಕ್ಷೇತ್ರ
  • ಕೆ ಆರ್ ಪುರ ವಿಧಾನ ಸಭಾ ಕ್ಷೇತ್ರ
  • ಸಿವಿ ರಾಮನ್ ವಿಧಾನ ಸಭಾ ಕ್ಷೇತ್ರ
  • ಶಿವಾಜಿ ನಗರ ವಿಧಾನ ಸಭಾ ಕ್ಷೇತ್ರ
  • ಶಾಂತಿ ನಗರ ವಿಧಾನ ಸಭಾ ಕ್ಷೇತ್ರ



Leave a Reply

Your email address will not be published. Required fields are marked *

error: Content is protected !!