ಜೂನ್ 16ರಿಂದ 30ರ ತನಕ ಪದವಿ, ವಿವಿ ಪ್ರಾಧ್ಯಾಪಕರಿಗೆ ರಜೆ

369

ಪ್ರಜಾಸ್ತ್ರ ಸುದ್ದಿ

ಬೆಂಗಳೂರು: ಕರೋನಾ ಲಾಕ್ ಡೌನ್ ನಿಂದಾಗಿ ಜೂನ್ 16ರಿಂದ 30ರ ತನಕ ಪದವಿ ಕಾಲೇಜು, ವಿಶ್ವವಿದ್ಯಾಲಯದ ಪ್ರಾಧ್ಯಾಪಕರಿಗೆ ರಜೆ ಘೋಷಿಸಲಾಗಿದೆ. ಉನ್ನತ ಶಿಕ್ಷಣ ಇಲಾಖೆ ರಜೆ ಘೋಷಿಸಿ ಆದೇಶ ಹೊರಡಿಸಿದೆ.

ಉನ್ನತ ಶಿಕ್ಷಣ ಇಲಾಖೆಯ ಹೆಚ್ಚುವರಿ ಮುಖ್ಯಕಾರ್ಯದರ್ಶಿ ರಮಣ ರೆಡ್ಡಿ ಮಹತ್ವದ ಆದೇಶ ಹೊರಡಿಸಿದ್ದಾರೆ. ಹೀಗಾಗಿ ಜೂನ್ 15ರೊಳಗೆ ಆನ್ ಲೈನ್ ಕ್ಲಾಸ್ ಗಳನ್ನ ನಡೆಸಬೇಕು ಎಂದಿದ್ದಾರೆ. ಉನ್ನತ ಶಿಕ್ಷಣ ಸಂಸ್ಥೆಗಳ ಮುಂದಿನ ಶೈಕ್ಷಣಿಕ ವರ್ಷದ ಕುರಿತು ಜುಲೈನಲ್ಲಿ ಕೇಂದ್ರ ಸರ್ಕಾರ ನಿರ್ಧಾರ ತೆಗೆದುಕೊಳ್ಳಲಿದೆ.

ಈಗಾಗ್ಲೇ ಕೇಂದ್ರ ಸರ್ಕಾರ ಲಾಕ್ ಡೌನ್ ಜೊತೆಗೆ ಸಡಿಲಿಕೆ ನೀಡಿದೆ. ಇದ್ರಿಂದಾಗಿ ಬಹುತೇಕ ಜನಜೀವನ ಸಹಜಸ್ಥಿತಿಯತ್ತ ಮರಳಿದೆ. ಆದ್ರೂ, ಆದೇಶದ ಪ್ರಕಾರ ಜೂನ್ 30ರ ತನಕ ಲಾಕ್ ಡೌನ್ ಇರಲಿದೆ.




Leave a Reply

Your email address will not be published. Required fields are marked *

error: Content is protected !!