239 ಜನರಲ್ಲಿ ಕರೋನಾ ಸೋಂಕು

303

ಪ್ರಜಾಸ್ತ್ರ ಸುದ್ದಿ

ಬೆಂಗಳೂರು: ಇವತ್ತಿನ ಕರೋನಾ ಹೆಲ್ತ್ ಬುಲೆಟಿನ್ ನಲ್ಲಿ 239 ಜನರಲ್ಲಿ ಸೋಂಕು ಕಾಣಿಸಿಕೊಂಡಿದೆ. ಈ ಮೂಲಕ ಸೋಂಕಿನ ಸಂಖ್ಯೆ 5,452ಕ್ಕೆ ಏರಿಕೆಯಾಗಿದೆ. ಇಂದು ಇಬ್ಬರು ಸೋಂಕಿಗೆ ಬಲಿಯಾಗಿದ್ದು, ಸಾವಿನ ಸಂಖ್ಯೆ 61 ಆಗಿದೆ.

ಇಂದು 143 ಜನರು ಡಿಸ್ಚಾರ್ಜ್ ಆಗಿದ್ದು, 2,132 ಜನರು ಇದುವರೆಗೂ ಕೋವಿಡ್ 19 ಸೋಂಕಿನಿಂದ ಗುಣಮುಖರಾಗಿದ್ದಾರೆ. ಇನ್ನು 3,257 ಪ್ರಕರಣಗಳು ಚಾಲ್ತಿಯಲ್ಲಿವೆ. ಇವತ್ತಿನ ಸೋಂಕಿನ ಕೇಸ್ ಗಳಲ್ಲಿ 183 ಹೊರ ರಾಜ್ಯ, 9 ಅಂತಾರಾಷ್ಟ್ರೀಯ ಪ್ರಯಾಣದ ಹಿನ್ನೆಲೆ ಇದೆ.

ಜಿಲ್ಲಾವಾರು ಸೋಂಕಿತ ಪ್ರಕರಣಗಳು ಇಲ್ಲಿವೆ

ಕಲಬುರಗಿ 39, ಯಾದಗಿರಿ 39, ಬೆಳಗಾವಿ 38, ಬೆಂಗಳೂರು 23, ದಕ್ಷಿಣ ಕನ್ನಡ 17, ದಾವಣಗೆರೆ 17, ಉಡುಪಿ 13, ಶಿವಮೊಗ್ಗ 12, ವಿಜಯಪುರ 9, ಬೀದರ 7, ಬಳ್ಳಾರಿ 6, ಬೆಂಗಳೂರು ಗ್ರಾಮಾಂತರ 5, ಹಾಸನ 5, ಧಾರವಾಡ 3, ಗದಗ 2, ಉತ್ತರ ಕನ್ನಡ 2, ಮಂಡ್ಯ 1, ರಾಯಚೂರು 1.. ಹೀಗೆ ಒಟ್ಟು 239 ಜನರಲ್ಲಿ ಸೋಂಕು ಕಾಣಿಸಿಕೊಂಡಿದೆ.




Leave a Reply

Your email address will not be published. Required fields are marked *

error: Content is protected !!