ದೇ.ಹಿಪ್ಪರಗಿ ಚುನಾವಣೆ: ಪೊಲೀಸ್ ಇಲಾಖೆ‌ ವಿಫಲ!

234

ಪ್ರಜಾಸ್ತ್ರ ಸುದ್ದಿ

ದೇವರಹಿಪ್ಪರಗಿ: ಪಟ್ಟಣ ಪಂಚಾಯಿತಿಯ 17 ವಾರ್ಡ್‌ ಗಳಿಗೆ ಇಂದು ಮತದಾನ ನಡೆಯುತ್ತಿದೆ. ಮಾಧ್ಯಾಹ್ನದ ಹೊತ್ತಿಗೆ ಶೇಕಡ 50ರಷ್ಟು ಮತದಾನ ಆಗಿದೆ. ಈ ಮೂಲಕ ಬಿರುಸಿನಿಂದ ಮತದಾನ ನಡೆದಿದೆ.

ಅಲ್ಲಲ್ಲಿ ಚಿಕ್ಕಪುಟ್ಟ ಘಟನೆಗಳು ಸಂಭವಿಸಿದೆ. ಪೊಲೀಸ್ ಇಲಾಖೆಯ ನಿರ್ಲಕ್ಷದಿಂದ ಅವ್ಯವಸ್ಥೆಯ ಆಗರವಾದ ಎಂದು ಮತದಾರರು ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ.

ಕೇಂದ್ರಗಳಲ್ಲಿ ಸರಿಯಾದ ಬಂದೋಬಸ್ತ್ ಇಲ್ಲದೆ ಕೇಂದ್ರದ ಒಳಗೆ ತಿರುಗಾಡುತ್ತಿರುವ ಅಭ್ಯರ್ಥಿಗಳು ಹಾಗೂ ಏಜೆಂಟರ್.
ಸ್ಥಳಕ್ಕೆ ಇಂಡಿ ಉಪವಿಭಾಗಾಧಿಕಾರಿ, ತಹಶೀಲ್ದಾರ್ ಸಿ ಎ ಗುಡದಿನ್ನಿ, ಚುನಾವಣಾಧಿಕಾರಿಗಳಾದ ಬಸವರಾಜ ಜಿಗಳೂರ ಹಾಗೂ ಸೆಕ್ಟರ್ ಆಫೀಸರುಗಳಿಂದ ಬಿಗಿಬಂದೋಬಸ್ತ್ ಕೈಗೊಂಡರು ಅಭ್ಯರ್ಥಿಗಳು ಕೇಳುತ್ತಿಲ್ಲ.

ಚುನಾವಣೆ ಕಣದಲ್ಲಿ ಒಟ್ಟು 52 ಅಭ್ಯರ್ಥಿಗಳು ಉಳಿದುಕೊಂಡಿದ್ದು, ಡಿಸೆಂಬರ್ 30ರಂದು ಫಲಿತಾಂಶ ಪ್ರಕಟವಾಗಲಿದೆ. ಅಂದು ಅಭ್ಯರ್ಥಿಗಳ ರಾಜಕೀಯ ಭವಿಷ್ಯ ತಿಳಿಯಲಿದೆ.




Leave a Reply

Your email address will not be published. Required fields are marked *

error: Content is protected !!