ರಾಮ ಮಂದಿರಕ್ಕೆ ದೇಣಿಗೆ: ನಮ್ಮ ಧರ್ಮ ಇಸ್ಲಾಂ.. ಆದ್ರೆ ನಾವು ಭಾರತದ ಹಿಂದೂಗಳು

348

ಗುವಾಟಿ: ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣಕ್ಕಾಗಿ ಆಸ್ಸಾಂನ ಹಲವು ಮುಸ್ಲಿಂ ಸಂಘಟನೆಗಳ ಪರವಾಗಿ ರಾಜ್ಯ ಅಲ್ಪಸಂಖ್ಯಾತ ಆಯೋಗಗಳ ಅಧ್ಯಕ್ಷ ಹಾಗೂ ಬಿಜೆಪಿ ವಕ್ತಾರ 5 ಲಕ್ಷ ರೂಪಾಯಿ ದೇಣಿಗೆ ನೀಡುವ ನೀರ್ಧಾರ ಹೇಳಿದ್ದಾರೆ. ಮಾಘ ಮೇಳ ಪ್ರದೇಶದ ಸ್ವಾಮಿ ಅಧೋಕ್ಷಜಾನಂದ ಶಿಬಿರಕ್ಕೆ ಬುಧವಾರ ಭೇಟಿ ನೀಡಿದ ವೇಳೆ ಈ ಕುರಿತು ಮಾತ್ನಾಡಿದ್ದಾರೆ.

ನಮ್ಮ ಧರ್ಮ ಇಸ್ಲಾಂ. ಆದ್ರೆ, ನಾವು ಭಾರತದ ಹೆಮ್ಮೆಯ ಹಿಂದೂಗಳು ಎಂದು ಆಸ್ಸಾಂ ಅಲ್ಪಸಂಖ್ಯಾತ ಆಯೋಗದ ಅಧ್ಯಕ್ಷ ಮತ್ತು ಬಿಜೆಪಿ ವಕ್ತಾರ ಸೈಯದ ಮುಮಿನಲ್ ಓವಲ್ ಹೇಳಿದ್ದಾರೆ. ದೇಶದ ಐಕ್ಯತೆ ಹಾಗೂ ಹಿಂದೂಗಳ ಧಾರ್ಮಿಕ ನಂಬಿಕೆಯ ಹಿನ್ನೆಲೆಯಲ್ಲಿ ಐದು ಲಕ್ಷ ರೂಪಾಯಿ ದೇಣಿಗೆ ನೀಡ್ತಿದ್ದೇವೆ ಅಂತಾ ಹೇಳಿದ್ದಾರೆ.

ಇನ್ನು ಪೌರತ್ವ ತಿದ್ದಪಡಿ ಕಾಯ್ದೆ ಬಗ್ಗೆ ಮಾತ್ನಾಡಿದ ಅವರು, ಪ್ರತಿಭಟನೆಗಳ ಹಿಂದೆ ಬಾಹ್ಯಶಕ್ತಿಗಳ ಕೈವಾಡವಿದೆ. ಇತರೆ ದೇಶಗಳು ಪಿಎಫ್ಐ ಮೂಲಕ ದೇಶದ ಶಾಂತಿಯನ್ನ ಕಸಿದುಕೊಳ್ಳಲು ನೋಡ್ತಿವೆ. ಹೀಗಾಗಿ ಜನರಲ್ಲಿ ಗೊಂದಲ ಸೃಷ್ಟಿಸುವ ಕೆಲಸ ಮಾಡಲಾಗ್ತಿದೆ ಎಂದು ಸೈಯದ ಮುಮಿನ್ ಓವಲ್ ಹೇಳಿದ್ದಾರೆ.

ಅಯೋಧ್ಯೆ ಕುರಿತು ಸುಪ್ರೀಂ ಕೋರ್ಟ್ ನಲ್ಲಿ ಅಂತಿಮ ತೀರ್ಪು ಬಂದ ಬಳಿಕ ಜೊನೊಗುಸ್ಥಿಯಾ ಸೊಮೊನ್ನೊಯಾ ಪರಿಷತ್ ಆಸೋಮ್ ಬ್ಯಾನರ್ ಅಡಿಯಲ್ಲಿ ದೇಣಿಗೆಯ ನಿರ್ಧಾರ ತೆಗೆದುಕೊಳ್ಳಲಾಗಿತ್ತು. ಟ್ರಸ್ಟ್ ರಚನೆಯಾದ ನಂತರ 21 ಮುಸ್ಲಿಂ ಸಂಘಟನೆಗಳು ಸೇರಿಕೊಂಡು ಹಣ ಸಂಗ್ರಹಿಸಿ ನೀಡುತ್ತೇವೆಂದು 2019 ನವೆಂಬರ್ 10ರಲ್ಲಿ ಹೇಳಲಾಗಿತ್ತು.




Leave a Reply

Your email address will not be published. Required fields are marked *

error: Content is protected !!