ಮತದಾರರ ಚೀಟಿಗೆ ಆಧಾರ್ ಕಾರ್ಡ್ ಲಿಂಕ್ ಮಸೂದೆ ಅಂಗೀಕಾರ

202

ಪ್ರಜಾಸ್ತ್ರ ಸುದ್ದಿ

ನವದೆಹಲಿ: ಲೋಕಸಭೆಯಲ್ಲಿ ಸಾಕಷ್ಟು ವಿರೋಧದ ನಡುವೆ ವೋಟರ್ ಐಡಿಗೆ ಆಧಾರ್ ಕಾರ್ಡ್ ನಂಬರ್ ಲಿಂಕ್ ಮಾಡುವ ಮಸೂದೆಯನ್ನು ಮಂಡಿಸಲಾಗಿದೆ. ಅಲ್ದೇ, ವಿರೋಧದ ನಡುವೆಯೂ ಅಂಗೀಕಾರಗೊಂಡಿದೆ. ಈ ಮೂಲಕ ಚುನಾವಣಾ ಕಾನೂನುಗಳ ತಿದ್ದುಪಡಿ 2021ನ್ನು ಮಂಡಿಸಲಾಯಿತು.

ಕೇಂದ್ರ ಕಾನೂನು ಸಚಿವ ಕಿರಣ್ ರಿಜಿಜು 1950 ಹಾಗೂ 1951ರ ಪ್ರಜಾಪ್ರತಿನಿಧಿ ಕಾಯ್ದೆಗಳಿಗೆ ತಿದ್ದುಪಡಿಗಳನ್ನು ಮಂಡಿಸಿದರು. ಈ ವೇಳೆ ಕಾಂಗ್ರೆಸ್ ಗದ್ದಲ ಶುರು ಮಾಡಿತು. ಹೀಗಾಗಿ ಕಲಾಪವನ್ನು ಮಧ್ಯಾಹ್ನಕ್ಕೆ ಮುಂದೂಡಲಾಯಿತು. ಮಧ್ಯಾಹ್ನ ಶುರುವಾದ ಕಲಾಪದಲ್ಲಿಯೂ ಕಾಂಗ್ರೆಸ್ ವಿರೋಧಿಸಿತು. ಇದರ ನಡುವೆಯೂ ಕಾಯ್ದೆ ಅಂಗೀಕಾರಗೊಂಡಿತು.

ಈ ತಿದ್ದುಪಡಿ ಮೂಲಕ ವೋಟರ್ ಗುರುತಿಸುವಿಕೆ ಸಂಬಂಧ ಆಧಾರ್ ನಂಬರ್ ಲಿಂಕ್ ಮಾಡಲಾಗುತ್ತೆ. ಹೆಂಡ್ತಿ ಅನ್ನೋ ಪದವನ್ನು ಸಂಗಾತಿ ಎಂಬ ಪದದಿಂದ ಪರಿಚಯಿಸುವ ಮೂಲಕ ಪ್ರಜಾಪ್ರತಿನಿಧಿ ಕಾಯ್ದೆಗೆ ತಿದ್ದುಪಡಿ ತರಲಾಗಿದೆ.




Leave a Reply

Your email address will not be published. Required fields are marked *

error: Content is protected !!